Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಪ್ರತಿ ಗರ್ಭಿಣಿಗೆ ತಾಯಿಕಾರ್ಡ್‌ ವಿತರಣೆ ಕಡ್ಡಾಯ: ಜಿಲ್ಲಾಧಿಕಾರಿ ಸೂಚನೆ….!

Dhrishya News by Dhrishya News
26/02/2026
in ಕರಾವಳಿ, ಸುದ್ದಿಗಳು
0
ಪ್ರತಿ ಗರ್ಭಿಣಿಗೆ ತಾಯಿಕಾರ್ಡ್‌ ವಿತರಣೆ ಕಡ್ಡಾಯ: ಜಿಲ್ಲಾಧಿಕಾರಿ  ಸೂಚನೆ….!
0
SHARES
30
VIEWS
Share on FacebookShare on Twitter

ಮಣಿಪಾಲ, ಫೆ. 26: ಜಿಲ್ಲೆಯಲ್ಲಿನ ಪ್ರತಿಯೊಬ್ಬ ಗರ್ಭಿಣಿಯಿಗೂ ತಾಯಿಕಾರ್ಡ್‌ ವಿತರಿಸುವುದನ್ನು ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನಿರ್ದೇಶನ ನೀಡಿದರು. ತಾಯಿಕಾರ್ಡ್‌ ಮೂಲಕ ಗರ್ಭಿಣಿಯರಿಗೆ ಆರೋಗ್ಯ ಸಂಬಂಧಿತ ಮಾಹಿತಿ ನೀಡುವ ಜೊತೆಗೆ ನಿಯಮಿತ ವೈದ್ಯಕೀಯ ತಪಾಸಣೆಗಳನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಅವರು ತಿಳಿಸಿದರು.

ಮಂಗಳವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗರ್ಭಿಣಿಯರು ಮತ್ತು ನವಜಾತ ಶಿಶುಗಳಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಆರೈಕೆ ಒದಗಿಸುವ ಮೂಲಕ ಜಿಲ್ಲೆಯ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ ಸಾಧಿಸಬೇಕು ಎಂದು ಒತ್ತಿಹೇಳಿದರು.

ಹೆರಿಗೆ ನಂತರವೂ ತಾಯಿ ಮತ್ತು ಶಿಶುವಿನ ಆರೋಗ್ಯದ ಮೇಲೆ ನಿರಂತರ ನಿಗಾವಹಿಸಬೇಕು. ಹೆಚ್ಚಿನ ಚಿಕಿತ್ಸೆ ಅಥವಾ ತಜ್ಞ ವೈದ್ಯರ ಸಲಹೆ ಅಗತ್ಯವಿದ್ದಲ್ಲಿ ತಕ್ಷಣವೇ ಶಿಫಾರಸು ಮಾಡಿ ಸೂಕ್ತ ವೈದ್ಯಕೀಯ ಸೇವೆ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಮಕ್ಕಳಿಗೆ ನೀಡಲಾಗುವ ಎಲ್ಲಾ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವುದು ಅತ್ಯಾವಶ್ಯಕ. ಒಂದು ಮಗು ಸಹ ಲಸಿಕೆಯಿಂದ ವಂಚಿತವಾಗಬಾರದು. ಲಸಿಕಾ ಕಾರ್ಯಕ್ರಮದಲ್ಲಿ ತಪ್ಪಿಸಿಕೊಂಡ ಮಕ್ಕಳಿಗೆ ಮರು ದಿನಾಂಕ ನಿಗದಿ ಮಾಡಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಸೂಚಿಸಿದರು.

ರಸ್ತೆಗಳಲ್ಲಿ ಅಲೆದಾಡುತ್ತಿರುವ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರನ್ನು ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು. ಚಿಕಿತ್ಸೆ ನೀಡಿದ ಬಳಿಕ ಸಾಧ್ಯವಾದಲ್ಲಿ ಅವರ ಕುಟುಂಬಸ್ಥರೊಂದಿಗೆ ಸಂಪರ್ಕ ಸಾಧಿಸಿ ಮರುಸೇರಿಸುವ ಕಾರ್ಯ ಮಾನವೀಯತೆಯಿಂದ ನಡೆಯಬೇಕು ಎಂದು ಹೇಳಿದರು.

ಜಿಲ್ಲೆಯ ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ರಕ್ತ ಸಂಗ್ರಹವಿದ್ದರೂ, ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚುತ್ತಿದೆ. ಆದ್ದರಿಂದ ಹೆಚ್ಚಿನ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಸಂಗ್ರಹ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಬೈಂದೂರು, ಕುಂದಾಪುರ ಹಾಗೂ ಉಡುಪಿಯ ತಾಯಿ-ಮಕ್ಕಳ ಆಸ್ಪತ್ರೆಗಳಲ್ಲಿ ರಕ್ತನಿಧಿ ಘಟಕಗಳನ್ನು ಶೀಘ್ರ ಆರಂಭಿಸುವಂತೆ ಸೂಚಿಸಿದರು.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್‌ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಸಂಬಂಧಿತ ನಗರ ಸ್ಥಳೀಯ ಸಂಸ್ಥೆಗಳು ಮಾರ್ಗಸೂಚಿಗಳಂತೆ ನಿಯಮಾನುಸಾರ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ವಿವಿಧ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು ಹಾಗೂ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Previous Post

ಇಂಧನ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ: ದೇಶಾದ್ಯಂತ E20 ಜಾರಿಗೆ ಕೇಂದ್ರ ನಿರ್ಧಾರ…!

Next Post

36ನೇ ಮಣಿಪಾಲ ನರ್ಸಿಂಗ್ ಕಾಲೇಜು ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕೋತ್ಸವ: ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಾಧನೆಗೆ ಗೌರವ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
36ನೇ ಮಣಿಪಾಲ ನರ್ಸಿಂಗ್ ಕಾಲೇಜು ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕೋತ್ಸವ: ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಾಧನೆಗೆ ಗೌರವ

36ನೇ ಮಣಿಪಾಲ ನರ್ಸಿಂಗ್ ಕಾಲೇಜು ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕೋತ್ಸವ: ಶೈಕ್ಷಣಿಕ ಮತ್ತು ಕ್ಲಿನಿಕಲ್ ಸಾಧನೆಗೆ ಗೌರವ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026

Recent News

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

ಬ್ರಹ್ಮಾವರದಲ್ಲಿ ಭೀಕರ ಅಪಘಾತ: ಹುಲಿವೇಷ ಕಲಾವಿದ ಮಂಜುನಾಥ್ ದುರ್ಮರಣ

01/07/2026
ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

ಇಂಡಸ್ಟ್ರಿಯಲ್ ಎಐ ಅನ್ನು ಚುರುಕುಗೊಳಿಸಲು ಬೆಂಗಳೂರಿನ ಎಬಿಬಿ ಇನ್ನೋವೇಶನ್ ಸೆಂಟರ್‌ ನಲ್ಲಿ ನಡೆದ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮದಲ್ಲಿ 37 ದೇಶಗಳ 1,000ಕ್ಕೂ ಹೆಚ್ಚು ಆವಿಷ್ಕಾರಕರು ಭಾಗಿ

01/07/2026
ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

01/07/2026
ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

ವಿಕಸಿತ ಭಾರತ’, ‘ವಿಶ್ವ ಗುರು ಭಾರತ’ ಬಿಜೆಪಿ ಗುರಿ : ಕುತ್ಯಾರು ನವೀನ್ ಶೆಟ್ಟಿ

01/07/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved