Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಓಪನ್‌ಎಐ ಜೊತೆ ಮಾಹೆ ಒಪ್ಪಂದ: ಬೋಧನೆ–ಸಂಶೋಧನೆಯಲ್ಲಿ ಎಐ ಅಳವಡಿಕೆ…!

Dhrishya News by Dhrishya News
26/02/2026
in ಕರಾವಳಿ, ಸುದ್ದಿಗಳು
0
ಓಪನ್‌ಎಐ ಜೊತೆ ಮಾಹೆ ಒಪ್ಪಂದ: ಬೋಧನೆ–ಸಂಶೋಧನೆಯಲ್ಲಿ ಎಐ ಅಳವಡಿಕೆ…!
0
SHARES
10
VIEWS
Share on FacebookShare on Twitter

ಮಣಿಪಾಲ, ಫೆ. 26: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಬೋಧನೆ, ಸಂಶೋಧನೆ ಹಾಗೂ ಶೈಕ್ಷಣಿಕ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳನ್ನು ಅಳವಡಿಸಲು ಓಪನ್‌ಎಐ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಸಹಭಾಗಿತ್ವದ ಮೂಲಕ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು, ಸಂಶೋಧನೆಗೆ ವೇಗ ನೀಡುವುದು ಹಾಗೂ ಜಾಗತಿಕ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ಎಐ ಕೌಶಲಗಳಿಂದ ಸಜ್ಜುಗೊಳಿಸುವ ಉದ್ದೇಶ ಹೊಂದಲಾಗಿದೆ. ಮಾಹೆ ತನ್ನ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಎಐ ಚಾಲಿತ ಪರಿಕರಗಳನ್ನು ಪರಿಚಯಿಸಿ, ವೈಯಕ್ತಿಕ ಕಲಿಕೆಗೆ ಉತ್ತೇಜನ ನೀಡಲಿದೆ. ಜೊತೆಗೆ ವಿಮರ್ಶಾತ್ಮಕ ಚಿಂತನೆ ಮತ್ತು ಎಐ ತಂತ್ರಜ್ಞಾನದ ನೈತಿಕ ಬಳಕೆಗೆ ಒತ್ತು ನೀಡಲಾಗುತ್ತದೆ.

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, “ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾವೀನ್ಯತೆ ನಮ್ಮ ಪ್ರಮುಖ ಆದ್ಯತೆ. ಬೋಧನೆ ಮತ್ತು ಸಂಶೋಧನೆಯಲ್ಲಿ ಎಐ ಅಳವಡಿಕೆ ಮಹತ್ವದ ಪರಿವರ್ತಕ ಹೆಜ್ಜೆಯಾಗಲಿದೆ. ಜವಾಬ್ದಾರಿಯುತ ಎಐ ಬಳಕೆಯ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುವುದು ನಮ್ಮ ಆಶಯ” ಎಂದು ತಿಳಿಸಿದ್ದಾರೆ.

ಈ ಒಪ್ಪಂದದಡಿ ಆರೋಗ್ಯ ವಿಜ್ಞಾನ, ತಂತ್ರಜ್ಞಾನ, ನಿರ್ವಹಣೆ, ಕಾನೂನು ಹಾಗೂ ಮಾನವಿಕ ವಿದ್ಯಾಶಾಖೆಗಳ ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಎಐ ಅನ್ವಯಿಕೆಗಳ ಕುರಿತು ಪ್ರಾಯೋಗಿಕ ಜ್ಞಾನ ನೀಡಲಾಗುತ್ತದೆ. ಅಂತರಶಿಸ್ತೀಯ ಸಂಶೋಧನೆ ಮತ್ತು ನವೀನತೆಗೆ ಒತ್ತು ನೀಡಲಾಗುತ್ತದೆ.

ಎಐ ಬಳಕೆಯನ್ನು ನೈತಿಕ ಹಾಗೂ ಪಾರದರ್ಶಕವಾಗಿ ಅನುಸರಿಸಲು ಮಾಹೆ ಸಮಗ್ರ ಆಡಳಿತ ಮಾರ್ಗಸೂಚಿಗಳನ್ನು ಜಾರಿಗೆ ತರಲಿದೆ. ಈ ಸಹಭಾಗಿತ್ವವು ಮಾಹೆಯ ಡಿಜಿಟಲ್ ರೂಪಾಂತರದ ಗುರಿಗೆ ಪೂರಕವಾಗಿದ್ದು, ಜಾಗತಿಕ ಮಟ್ಟದಲ್ಲಿ ‘ಎಐ-ಶಕ್ತ’ ವಿಶ್ವವಿದ್ಯಾಲಯವಾಗುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

Previous Post

ಮೊದಲ ಬಾರಿ ಶಾಸಕರಿಗೆ ಸಚಿವ ಸ್ಥಾನ ಇಲ್ಲ; ಸಿಎಂ ಸ್ಪಷ್ಟನೆ…..!

Next Post

ಉಡುಪಿ ನಗರಸಭೆಯಲ್ಲಿ ರಶೀದಿ ಗೊಂದಲ – ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ನಗರಸಭೆಯಲ್ಲಿ ರಶೀದಿ ಗೊಂದಲ – ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ….!

ಉಡುಪಿ ನಗರಸಭೆಯಲ್ಲಿ ರಶೀದಿ ಗೊಂದಲ – ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಉದ್ಯಮಿ ಭೂಪೇಂದ್ರ ಕುಮಾರ್ ಮೋದಿ ಭೇಟಿ

04/10/2026
ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

ಅಟ್ಲಾಂಟಾದಲ್ಲಿ ಪುತ್ತಿಗೆ ಶ್ರೀಗಳಿಗೆ ಗುರು ಅಭಿವಂದನೆಯ ಮಹಾಪೂರ

04/10/2026
ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

ಕಾರ್ಕಳದಲ್ಲಿ ಅ.5 ರಂದು ಬಿಜೆಪಿ ಬೃಹತ್ ಪ್ರತಿಭಟನೆ

03/10/2026
ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

ಉಡುಪಿ: ಸ್ವಚ್ಛ ಭಾರತ್ ಅಭಿಯಾನ ಸಂಪನ್ನ

02/10/2026

Recent News

imunify-bot-check