ಕಾರ್ಕಳ, ಫೆ. 19: ಜಮೀಯತುಲ್ ಫಲಹ ಕಾರ್ಕಳ ಘಟಕದ ವತಿಯಿಂದ ಪವಿತ್ರ ರಂಜಾನ್ ಮಾಸದ ಅಂಗವಾಗಿ ಅತಿ ಕಡುಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮವು ಇಂದು ಕಾರ್ಕಳದ ರೋಸ್ನಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಭಯ ಜಿಲ್ಲಾಧ್ಯಕ್ಷ ಅಷ್ಪಕ್ ಮಹಮ್ಮದ್ ಮಾತನಾಡಿ, “ಸಮಾಜದ ಪ್ರತಿಯೊಬ್ಬ ಕಡುಬಡ ಕುಟುಂಬವೂ ನೆಮ್ಮದಿ ಹಾಗೂ ಸಂತೋಷದಿಂದ ಉಪವಾಸ ವ್ರತ ಆಚರಿಸಲು ಸಾಧ್ಯವಾಗಬೇಕು ಎಂಬುದು ಸಂಘಟನೆಯ ಉದ್ದೇಶವಾಗಿದೆ. ಉಭಯ ಜಿಲ್ಲೆಗಳ 14 ತಾಲೂಕುಗಳಲ್ಲಿ ಅರ್ಹ ಬಡ ಕುಟುಂಬಗಳನ್ನು ಗುರುತಿಸಿ, ದಾನಿಗಳ ಸಹಕಾರದಿಂದ ದಿನಸಿ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಮನೆಗೆ ತಲುಪಿಸುವ ಕಾರ್ಯವನ್ನು ಕೈಗೊಂಡಿದ್ದೇವೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ಲಾ, ಎಜಾಜ್ ಶರೀಫ್, ಮೊಹಮ್ಮದ್ ರಶೀದ್ (ಬಂಗ್ಲೆಗುಡ್ಡೆ), ಕೋಶಾಧಿಕಾರಿ ಮೊಹಮ್ಮದ್ ಶರೀಫ್, ಜಿದ್ದ ಘಟಕದ ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ಹಸನ್ ನಿಟ್ಟೆ, ಸೈಯದ್ ಹಸನ್, ಅಬ್ಬಾಸ್ ಸಾಹೇಬ್ ಹಾಗೂ ಸಮದ್ ಖಾನ್ ಉಪಸ್ಥಿತರಿದ್ದರು.







