Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

Dhrishya News by Dhrishya News
13/02/2026
in ಕರಾವಳಿ, ಮುಖಪುಟ
0
ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!
0
SHARES
2
VIEWS
Share on FacebookShare on Twitter

ಪುತ್ತೂರು: ಫೆಬ್ರವರಿ 13: ಭಾರತ ಯಾವಾಗಲೂ ತಾರುಣ್ಯ ರಾಷ್ಟ್ರವಾಗಿರಬೇಕು ಎಂಬುದು ಸ್ವಾಮಿ ವಿವೇಕಾನಂದರ ಕನಸಾಗಿತ್ತು ಎಂದು ಕಾರ್ಕಳದ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಹೇಳಿದರು.

ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಐಕ್ಯೂಎಸಿ ಮತ್ತು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ನಡೆದ 25ನೇ ಸಂಚಿಕೆಯ ‘ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಯುವಕರು ತಮ್ಮ ಹೆಜ್ಜೆಗುರುತು ಸ್ಪಷ್ಟವಾಗಿ ಉಳಿಯುವಂತೆ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಭಾರತೀಯನು ವಿದ್ಯಾವಂತನಾಗಬೇಕು. ವಿವೇಕಾನಂದರ ನೈತಿಕತೆ ಮತ್ತು ವ್ಯಕ್ತಿತ್ವವನ್ನು ಅಳವಡಿಸಿಕೊಂಡು ಉನ್ನತ ಗುರಿ ಹೊಂದಿದರೆ ದೇಶವನ್ನು ಬೆಳಗಿಸುವ ಶಕ್ತಿ ಯುವಕರಲ್ಲಿದೆ ಎಂದು ಹೇಳಿದರು. ನಮ್ಮಿಂದ ಯಾವುದೂ ಸಾಧ್ಯವಿಲ್ಲ ಎಂದುಕೊಂಡಾಗ ಸ್ವಾಮೀಜಿಯವರ ಚಿಂತನೆಗಳು ಆತ್ಮಸ್ಥೈರ್ಯ ತುಂಬುತ್ತವೆ. ಇಂದಿಗೂ ರಾಷ್ಟ್ರದ ಅನೇಕ ಪ್ರಗತಿಪರ ಕಾರ್ಯಗಳಿಗೆ ಅವರೇ ಸ್ಫೂರ್ತಿ ಎಂದು ಅವರು ಅಭಿಪ್ರಾಯಪಟ್ಟರು.

ಇಂದಿನ ಯುವಕರು ಬಲಿಷ್ಠರು, ವಿದ್ಯಾವಂತರು ಹಾಗೂ ಉತ್ತಮ ಚಿಂತನೆ ಹೊಂದಿದ ಭಾರತದ ಪ್ರಜೆಗಳಾಗಿ ರೂಪುಗೊಳ್ಳಬೇಕು. ಭಾರತವು ವಿಶ್ವದ ಐದನೇ ಶ್ರೀಮಂತ ರಾಷ್ಟ್ರವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಮ್ ಮಾತನಾಡಿ, ವಿಕಸಿತ ಮತ್ತು ಆತ್ಮನಿರ್ಭರ ಭಾರತದ ಕನಸಿಗೆ ವಿವೇಕಾನಂದರೇ ಪ್ರೇರಣೆ ಎಂದರು. ಭಾರತವು ಆಧ್ಯಾತ್ಮ ಚಿಂತನೆಗೆ ಪೂರಕವಾಗಿ ಮುಂದುವರಿದರೆ ವಿಶ್ವಗುರುವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಪ್ರಾಧ್ಯಾಪಕ ರಾಧಾಕೃಷ್ಣ ರೈ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಶೋಧನಾ ಕೇಂದ್ರದ ನಿರ್ದೇಶಕಿ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಸ್ವಾಗತಿಸಿದರು. ಶಿಕ್ಷಕಿ ಕವಿತಾ ಕೆ.ಜಿ ವಂದಿಸಿದರು. ವಿದ್ಯಾರ್ಥಿ ನವೀನ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Previous Post

ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ..!

Next Post

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

13/02/2026
ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

13/02/2026
ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ..!

ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ..!

13/02/2026
ಇನ್ನಂಜೆ: ಸುರೇಶ್ ಶೆಟ್ಟಿ ಮೂಲಕ ₹40 ಲಕ್ಷ ರಸ್ತೆ ಕಾಮಗಾರಿಗೆ ಚಾಲನೆ….!

Recent News

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

ಬ್ರಹ್ಮಾವರ: ಅಕ್ರಮ ಮರಳು ಸಾಗಾಟ ಪ್ರಕರಣ — ಆರೋಪಿಗೆ ಮಧ್ಯಂತರ ಜಾಮೀನು..!

13/02/2026
ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

ವಿಕಸಿತ ಭಾರತ ಕನಸು ಸಾಕಾರಕ್ಕೆ ಯುವಕರ ಪಾತ್ರ ಮಹತ್ವದ್ದು : ವಿವೇಕ ಸ್ಮೃತಿ’ ಕಾರ್ಯಕ್ರಮದಲ್ಲಿ ರಮಿತಾ ಸೂರ್ಯವಂಶಿ..!!

13/02/2026
ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ..!

ಸೌತ್ ಯುನೈಟೆಡ್ ಫುಟ್‌ ಬಾಲ್ ಕ್ಲಬ್‌ ನ ಅಧಿಕೃತ ಸ್ಪೋರ್ಟ್ಸ್ ಮೆಡಿಸಿನ್ ಮತ್ತು ವೈದ್ಯಕೀಯ ಸೇವಾ ಪಾಲುದಾರರಾಗಿ ಸಹಭಾಗಿತ್ವ ಮಾಡಿಕೊಂಡ ಹೊಸ್ಮಟ್ ಆಸ್ಪತ್ರೆ..!

13/02/2026
ಇನ್ನಂಜೆ: ಸುರೇಶ್ ಶೆಟ್ಟಿ ಮೂಲಕ ₹40 ಲಕ್ಷ ರಸ್ತೆ ಕಾಮಗಾರಿಗೆ ಚಾಲನೆ….!

ಇನ್ನಂಜೆ: ಸುರೇಶ್ ಶೆಟ್ಟಿ ಮೂಲಕ ₹40 ಲಕ್ಷ ರಸ್ತೆ ಕಾಮಗಾರಿಗೆ ಚಾಲನೆ….!

13/02/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved