Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ನಕಲಿ ಬ್ಯಾಂಕ್ ಸೀಲ್ ಬಳಸಿ ಆಸ್ತಿ ತೆರಿಗೆ ವಂಚನೆ: ನಗರಸಭೆ ಪೌರಾಯುಕ್ತರಿಂದ ದೂರು….!

Dhrishya News by Dhrishya News
13/02/2026
in ಕರಾವಳಿ, ಸುದ್ದಿಗಳು
0
ನಕಲಿ ಬ್ಯಾಂಕ್ ಸೀಲ್ ಬಳಸಿ ಆಸ್ತಿ ತೆರಿಗೆ ವಂಚನೆ: ನಗರಸಭೆ ಪೌರಾಯುಕ್ತರಿಂದ ದೂರು….!
0
SHARES
17
VIEWS
Share on FacebookShare on Twitter

ಉಡುಪಿ, ಫೆ. 13: ನಗರಸಭೆಯ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆಯಲ್ಲಿ ನಕಲಿ ಬ್ಯಾಂಕ್ ಸೀಲ್ ಬಳಸಿಕೊಂಡು ವಂಚನೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ಅವರು ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ನಗರಸಭೆಯ ಆಸ್ತಿ ತೆರಿಗೆಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜಿಸಿ, ಯೂನಿಯನ್ ಬ್ಯಾಂಕ್‌ನಲ್ಲಿರುವ ನಗರಸಭೆಯ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ.

ಫೆ.3 ರಂದು ಕಚೇರಿಯಲ್ಲಿ ತೆರಿಗೆ ಪಾವತಿಯ ವಿವರಗಳನ್ನು ತುಲನೆ ಮಾಡುವಾಗ ಅಧಿಕಾರಿಗಳಿಗೆ ಮೊದಲ ಅನುಮಾನ ವ್ಯಕ್ತವಾಗಿದೆ.

ಜ.28 ರಂದು ಪಾವತಿಯಾಗಿರುವ ಚಲನ್ ಮೇಲೆ ಯೂನಿಯನ್ ಬ್ಯಾಂಕ್‌ ಸೀಲ್ ಇತ್ತು. ಆದರೆ, ಬ್ಯಾಂಕ್ ಪಾಸ್‌ಬುಕ್ ಅಥವಾ ವಿವರ ಪಟ್ಟಿಯಲ್ಲಿ ಆ ಹಣ ಜಮೆಯಾದ ಬಗ್ಗೆ ಯಾವುದೇ ನಮೂದು ಇರಲಿಲ್ಲ.

ಫೆ.4 ರಂದು ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಜ.28 ರಂದು ಬಳಕೆಯಾಗಿದ್ದ ಅದೇ ಚಲನ್ ಸಂಖ್ಯೆಯನ್ನು ಫೆ.4 ರಂದು ಮತ್ತೆ ಬಳಸಿರುವುದು ಪತ್ತೆಯಾಗಿದೆ. ಎರಡೂ ಚಲನ್ ಗಳ ಮೇಲೆ ಬ್ಯಾಂಕ್ ಸೀಲ್ ಇರುವುದು ಕಂಡುಬಂದಿದೆ.

ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್‌ನ ಅಧಿಕೃತ ಸೀಲ್ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರಿಂದ ತೆರಿಗೆ ಹಣ ಪಡೆದು, ಅವರಿಗೆ ಬ್ಯಾಂಕ್ ಸೀಲ್ ಇರುವ ನಕಲಿ ಚಲನ್ ನೀಡಿ ಆ ಹಣವನ್ನು ನಗರಸಭೆಯ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ವಂಚನೆ ಎಸಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ.

Previous Post

ರಾ.ಹೆ.66 ಅಂಬಲಪಾಡಿ ಅಭಿವೃದ್ಧಿಗೆ ಸಂಸದರಿಗೆ ಮನವಿ..!

Next Post

ಉಡುಪಿ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಕೆಗೆ ಚಾಲನೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಕೆಗೆ ಚಾಲನೆ….!

ಉಡುಪಿ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಕೆಗೆ ಚಾಲನೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲೊಂದು ಅಪರೂಪದ ‘ಚತುರ್ದಶ ಪ್ರದಕ್ಷಿಣೆ’ ಸೇವೆ

ಪಣಿಯಾಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲೊಂದು ಅಪರೂಪದ ‘ಚತುರ್ದಶ ಪ್ರದಕ್ಷಿಣೆ’ ಸೇವೆ

18/09/2026
ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

ಜನ್ಮಾಷ್ಟಮಿ ವೇಳೆ ವೇಷಧರಿಸಿ ಸಂಗ್ರಹಿಸಿದ ₹5 ಲಕ್ಷ; ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ನೆರವು..!

17/09/2026
ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

ಮಾಹೆಯಿಂದ ‘ಡಾ. ಟಿ.ಎಂ.ಎ. ಪೈ ಹಸಿರು ಕ್ಯಾಂಪಸ್ ಶ್ರೇಷ್ಠತಾ ಪ್ರಶಸ್ತಿ’ ಘೋಷಣೆ..!

17/09/2026
ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

ಸೆಪ್ಟೆಂಬರ್ 20: ಉಡುಪಿಯಲ್ಲಿ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ (ರಿ)ವತಿಯಿಂದ ಓಣಂ ಆಚರಣೆ

17/09/2026

Recent News

imunify-bot-check