Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!

Dhrishya News by Dhrishya News
12/02/2026
in ಸುದ್ದಿಗಳು
0
ರಸ್ತೆಯಲ್ಲಿ ಸಿಕ್ಕ ಚಿನ್ನದ ಬಳೆ ಮರಳಿಸಿದ ನಿವೃತ್ತ ಶಿಕ್ಷಕ: ಪ್ರಾಮಾಣಿಕತೆಗೆ ಪೊಲೀಸರ ಅಭಿನಂದನೆ…!
0
SHARES
49
VIEWS
Share on FacebookShare on Twitter

ಕೋಟ, ಫೆ. 12: ರಸ್ತೆಯಲ್ಲಿ ಪತ್ತೆಯಾದ ಚಿನ್ನದ ಬಳೆಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಅದರ ನಿಜವಾದ ಮಾಲೀಕರಿಗೆ ಮರಳಿಸುವಲ್ಲಿ ಸಹಕರಿಸಿದ ವ್ಯಕ್ತಿಯ ಪ್ರಾಮಾಣಿಕತೆಯನ್ನು ಕೊಂಡಾಡಿ, ಕೋಟ ಪೊಲೀಸ್ ಠಾಣೆಯಲ್ಲಿ ಫೆ.10ರಂದು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಬ್ರಹ್ಮಾವರ ನಿವಾಸಿ, ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಸುಮಾ ಅವರು ಶಾಲೆಗೆ ತೆರಳುವ ಸಲುವಾಗಿ ಜ.13 ರಂದು ಸ್ಕೂಟರ್‌ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುವ ವೇಳೆ ಸುಮಾರು 1.50 ಲಕ್ಷ ಮೌಲ್ಯದ ಎರಡು ಪವನ್ ಚಿನ್ನದ ಬಳೆಯನ್ನು ಮಾಬುಕಳ ಸೇತುವೆ ಸಮೀಪ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಅದೇ ದಿನ ಬನ್ನಾಡಿ ನಿವಾಸಿ, ನಿವೃತ್ತ ದೈ.ಶಿ.ಶಿಕ್ಷಕ ಪ್ರವೀಣ್ ಹೆಗ್ಡೆಯವರು ಉಡುಪಿಯಿಂದ ಕೋಟಕ್ಕೆ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಆಕಸ್ಮಿಕವಾಗಿ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿತ್ತು. ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳುವಾಗ ರಸ್ತೆ ಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಅವರ ಗಮನಕ್ಕೆ ಬಂದಿದೆ. ಅದರ ಮಾಲಕರು ಯಾರೆಂದು ತಿಳಿಯದ ಕಾರಣ ಬಳೆಯನ್ನು ಎತ್ತಿಕೊಂಡು ಮನೆಗೆ ತೆರಳಿದ್ದರು. ಅನಂತರ ಒಂದಷ್ಟು ದಿನ ಕಾದರೂ ಕಳೆದುಕೊಂಡವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಹೀಗಾಗಿ ತುರ್ತು ಕೆಲಸದ ನಿಮಿತ್ತ ಪ್ರವೀಣ್ ಅವರು ಬೆಂಗಳೂರಿಗೆ ತೆರಳಿದ್ದು, ಬಳೆಯನ್ನು ಮನೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು.

ಈ ನಡುವೆ ಸುಮಾ ಅವರು ಬಳೆ ಕಳೆದುಕೊಂಡ ಕುರಿತು ನೀಡಿದ ದೂರಿನ ಮಾಹಿತಿ ಬೀಟ್ ಪೊಲೀಸ್ ವಾಟ್ಸಪ್ ಗ್ರೂಪ್‌ನಲ್ಲಿ ನೀಡಲಾಗಿತ್ತು. ಇದನ್ನು ಗಮನಿಸಿದ ಪ್ರವೀಣ್ ಅವರು ಕೋಟ ಪೊಲೀಸ್‌ ಠಾಣೆಗೆ ತೆರಳಿ ಬಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ಸುಮಾ ಅವರನ್ನು ಠಾಣೆಗೆ ಕರೆಸಿ ಪ್ರವೀಣ್‌ ಹೆಗ್ಡೆಯವರ ಕೈಯಿಂದ ಬಲೆ ಹಸ್ತಾಂತರಿಸಿದರು. ಕಳೆದುಕೊಂಡ ಬಲೆ ಹಿಂದಿರುಗಿದಾಗ ಸುಮಾಳ ಸಂತೋಷಕ್ಕೆ ಪರವೇ ಇರಲಿಲ್ಲ.

ಪ್ರವೀಣ್ ಹೆಗ್ಡೆ ಅವರ ಪ್ರಾಮಾಣಿಕತೆಗೆ ಮೆಚ್ವಿ ಠಾಣಾಧಿಕಾರಿಗಳು ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ. ಸಂದರ್ಭದಲ್ಲಿ ಠಾಣೆಯ ಕ್ರೈಂ ವಿಭಾಗದ ಉಪನಿರೀಕ್ಷಕ ಮಾಂತೇಶ್ ಜಾಭಗೌಡ ಹಾಗೂ ಸಿಬಂದಿಗಳಿದ್ದರು.

Previous Post

ಮೊಬೈಲ್ ಟವರ್‌ನಲ್ಲಿ ಎಕ್ಸೈಡ್ ಬ್ಯಾಟರಿ ಕಳವು…!

Next Post

1ರಿಂದ 19 ವರ್ಷದ ಮಕ್ಕಳಿಗೆ ಉಚಿತ ಮಾತ್ರೆ: ಜಂತುಹುಳು ನಿವಾರಣಾ ದಿನ ಆಚರಣೆ….!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
1ರಿಂದ 19 ವರ್ಷದ ಮಕ್ಕಳಿಗೆ ಉಚಿತ ಮಾತ್ರೆ: ಜಂತುಹುಳು ನಿವಾರಣಾ ದಿನ ಆಚರಣೆ….!

1ರಿಂದ 19 ವರ್ಷದ ಮಕ್ಕಳಿಗೆ ಉಚಿತ ಮಾತ್ರೆ: ಜಂತುಹುಳು ನಿವಾರಣಾ ದಿನ ಆಚರಣೆ....!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಲ್ಪೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ನಾಪತ್ತೆ..!

ಹೊಸಂಗಡಿಯಿಂದ ಯುವಕ ನಾಪತ್ತೆ: ಪ್ರಕರಣ ಧಾಖಲು..!

05/10/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಮಲ್ಪೆಯಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಕಳವು..!

05/10/2026
ಕಾರ್ಕಳ: ಕಾರು ಡಿಕ್ಕಿ – ಪಾದಚಾರಿ ಸ್ಥಳದಲ್ಲೇ ಮೃತ್ಯು

ಕಾರ್ಕಳ: ಲಾರಿಗೆ ಬೈಕ್ ಡಿಕ್ಕಿ, ಸವಾರ ಸಾವು

05/10/2026
ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅ.6ರಿಂದ 8ರವರೆಗೆ ಗುರುಗಳ ವಾಸ್ತವ್ಯ..!

ಕಜ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅ.6ರಿಂದ 8ರವರೆಗೆ ಗುರುಗಳ ವಾಸ್ತವ್ಯ..!

05/10/2026

Recent News

imunify-bot-check