Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸೇನಾ ಗ್ರೂಪ್ C ಪರೀಕ್ಷೆಯಲ್ಲಿ ನಕಲು : 18 ಅಭ್ಯರ್ಥಿಗಳ ಬಂಧನ….!!

Dhrishya News by Dhrishya News
11/02/2026
in ಸುದ್ದಿಗಳು
0
ಸೇನಾ ಗ್ರೂಪ್ C ಪರೀಕ್ಷೆಯಲ್ಲಿ ನಕಲು : 18 ಅಭ್ಯರ್ಥಿಗಳ ಬಂಧನ….!!
0
SHARES
21
VIEWS
Share on FacebookShare on Twitter

ಬೆಂಗಳೂರು, ಫೆ. 11: ಇತ್ತೀಚೆಗೆ ನಡೆದ ಸೇನೆಯ ಗ್ರೂಪ್–ಸಿ ನೇಮಕಾತಿ ಲಿಖಿತ ಪರೀಕ್ಷೆಯಲ್ಲಿ ನಕಲು ನಡೆಸಿದ ಆರೋಪದ ಮೇರೆಗೆ 18 ಮಂದಿ ಅಭ್ಯರ್ಥಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

515 ಆರ್ಮಿ ಬೇಸ್ ವರ್ಕ್‌ಶಾಪ್‌ನ ಕಮಾಂಡಂಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಭದ್ರತಾ ಅಧಿಕಾರಿ ಕರ್ನಲ್ ಎಸ್.ಎಸ್. ಜ್ಯೋತಿರ್ಲಿಂಗಮ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಪರೀಕ್ಷೆಯ ವೇಳೆ ಕೆಲ ಅಭ್ಯರ್ಥಿಗಳು ಡಿಜಿಟಲ್ ಸಾಧನಗಳನ್ನು ಬಳಸಿ ಅಕ್ರಮ ನಡೆಸಿರುವುದಾಗಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಸುರೇಂದರ್, ಸಂದೀಪ್, ಮೊಂಟಿ, ಅಜಯ್ ಕುಮಾರ್, ಅನುಜ್, ರಾಹುಲ್, ಸುಮಿತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್ ಬಿನ್ ದಲ್‌ಬೀರ್, ಅಮನ್ ರೇದು, ರಜತ್, ವಿನಯ್, ಅಂಕಿತ್ ಬಿನ್ ರಾಜೇಂದರ್, ಅಮನ್ ಕುಮಾರ್ ಮತ್ತು ಮನಿಶ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ..

ಫೆ. 8 ರಂದು 515 ಆರ್ಮಿ ಬೇಸ್ ವರ್ಕ್ ಶಾಪ್ ವತಿಯಿಂದ ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ ಮೆಂಟ್‌ನ ಗ್ರೂಪ್ ಸಿ ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಯ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯಿತು. ಈ ವೇಳೆ ಪರೀಕ್ಷೆ ಬರೆಯುವ ವೇಳೆ 18 ಅಭ್ಯರ್ಥಿಗಳು ಡಿಜಿಟಲ್ ಸಾಧನಗಳನ್ನು ಬಳಸಿ, ಸಿಕ್ಕಿಬಿದಿದ್ದಾರೆ ಎಂದು ಜ್ಯೋತಿರ್ಲಿಂಗಮ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಪರೀಕ್ಷಾ ಆವರಣದಲ್ಲೂ ಎಲೆಕ್ಟ್ರಾನಿಕ್ ಸಾಧನಗಳು ಸಿಕ್ಕಿದೆ.

ಈ ಪೈಕಿ ಅಮನ್ ಮತ್ತು ರಾಜೇಂದರ್‌ಅವರು ಪರೀಕ್ಷಾ ಕೊಠಡಿಯ ಹೊರೆಗೆ ಇರಿಸಲಾದ ಬ್ಯಾಗ್‌ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿದೆ. ಅಭ್ಯರ್ಥಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ. ಕರ್ನಲ್ ಜ್ಯೋತಿರ್ಲಿಂಗಮ್ ದೂರು ಆಧರಿಸಿ ಎಫ್‌ಐಆರ್‌ದಾಖಲಿಸಿಕೊಂಡು, 18 ಮಂದಿ ಯನ್ನು ಬಂಧಿಸಿ, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Previous Post

ಬೆಳ್ತಂಗಡಿ :ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್‌ಗೆ ಟ್ವಿಸ್ಟ್ – ಸತ್ಯ ಬಿಚ್ಚಿಟ್ಟ ತನಿಖೆ..!!

Next Post

ಕಾರು ಪರಿಶೀಲನೆ ವೇಳೆ ಎಂಡಿಎಂಎ ಜಪ್ತಿ;ಆರೋಪಿ ಬಂಧನ…!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಾರು ಪರಿಶೀಲನೆ ವೇಳೆ ಎಂಡಿಎಂಎ ಜಪ್ತಿ;ಆರೋಪಿ ಬಂಧನ…!

ಕಾರು ಪರಿಶೀಲನೆ ವೇಳೆ ಎಂಡಿಎಂಎ ಜಪ್ತಿ;ಆರೋಪಿ ಬಂಧನ...!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಣಿಪಾಲದಲ್ಲಿ ಅಂದರ್‌ ಬಾಹರ್‌ ಜುಗಾರಿ: 6 ಮಂದಿ ವಶಕ್ಕೆ

ಮಣಿಪಾಲದಲ್ಲಿ ಅಂದರ್‌-ಬಾಹರ್‌ ಜುಗಾರಿ; ಆರು ಮಂದಿ ವಶಕ್ಕೆ

30/09/2026
ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

ಬೈಂದೂರು: ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹ ಪತ್ತೆ

30/09/2026
ಶಿರ್ವದಲ್ಲಿ ಕೋಳಿ ಜೂಜಾಟ: 9 ಮಂದಿ ಬಂಧನ, 13 ಕೋಳಿ ಹುಂಜಗಳು ಸಹಿತ ವಿವಿಧ ವಸ್ತುಗಳ ಸ್ವಾಧೀನ

ಮಲ್ಪೆಯಲ್ಲಿ ಕೋಳಿ ಅಂಕಕ್ಕೆ ಪೊಲೀಸರ ದಾಳಿ; ಐವರು ವಶಕ್ಕೆ

30/09/2026
ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

30/09/2026

Recent News

imunify-bot-check