Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!

Dhrishya News by Dhrishya News
10/02/2026
in ಮುಖಪುಟ
0
ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದನೆ : ಆರು ವರ್ಷಗಳ ಬಳಿಕ ಪತ್ನಿಯ ಬಳಿ ಸೇರಿದ ಮನೋರೋಗಿ..!
0
SHARES
19
VIEWS
Share on FacebookShare on Twitter

ಉಡುಪಿ. ಫೆಬ್ರವರಿ.10 :- ಕಳೆದ ಮೂರುವರೆ ತಿಂಗಳ ಹಿಂದೆ ವಿಶುಶೆಟ್ಟಿ ಅಂಬಲಪಾಡಿಯವರಿಂದ ರಕ್ಷಿಸಲ್ಪಟ್ಟ ಮನೋರೋಗಿ ಜಿಲ್ಲಾಸ್ಪತ್ರೆಯ ದೀರ್ಘಕಾಲದ ಚಿಕಿತ್ಸೆಗೆ ಸ್ಪಂದಿಸಿದ್ದು, ಇದೀಗ ವ್ಯಕ್ತಿಯ ಪತ್ನಿ ದೂರದ ತಮಿಳುನಾಡಿನಿಂದ ಬಂದಿದ್ದು ಪತಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋದ ಮಾನವೀಯ ಕೆಲಸ ನಡೆದಿದೆ.

ಮನೋರೋಗಿ ರವೀಂದ್ರ (35 ವರ್ಷ ) ರಾಷ್ಟ್ರೀಯ ಹೆದ್ದಾರಿ ಬಳಿ ಮಾನಸಿಕ ಅಸ್ವಸ್ಥನಾಗಿ ಅನಾಗರಿಕ ಬದುಕಿನಲ್ಲಿ ತಿರುಗಾಡುತ್ತಿದ್ದು , ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಜಿಲ್ಲಾಸ್ಪತರೆಯ ಮನೋರೋಗ ತಜ್ಞ ಡಾ.ವಾಸುದೇವ, ಡಾ.ಸುನಿಲ್ ಆರೋಗ್ಯ ಸಹಾಯಕರು ಹಾಗೂ ಇ ಸಿ ಆರ್ ಸಿ ಸಿಬ್ಬಂದಿಗಳ ಚಿಕಿತ್ಸೆ, ಸಮಾಲೋಚನೆ ಹಾಗೂ ಆರೈಕೆಗೆ ನಿಧಾನವಾಗಿ ಸ್ಪಂದಿಸಿದ ರೋಗಿ ತನ್ನ ಊರಾದ ತಮಿಳು ನಾಡಿನ ಕೆಲವು ಮಾಹಿತಿ‌ ನೀಡಿದ್ದು, ಮಾಹಿತಿಯ ಆಧಾರದಲ್ಲಿ ಡಾ. ವಾಸುದೇವ ರೋಗಿಯ ಸಂಬಂಧಿಕರನ್ನು ನಿರಂತರ ಪ್ರಯತ್ನಿಸಿದಾಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತೀರಾ ಬಡ ಕುಟುಂಬದ ರೋಗಿಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ. ಪತ್ನಿಯ ಮನವೊಲಿಸಿ ಉಡುಪಿಗೆ ಕರೆತರುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ಇದೀಗ ರೋಗಿಯ ಪತ್ನಿ ಹಾಗೂ ಸಂಬಂಧಿ ಮಹಿಳೆಯೊರ್ವರು ಉಡುಪಿಗೆ ಬಂದಿದ್ದು ಪತಿಯನ್ನು ನೋಡಿ ಸಂತೋಷಗೊಂಡಿದ್ದಾರೆ. ನಾಪತ್ತೆ ಆಗಿ ಆರು ವರುಷಗಳೇ ಆಗಿದೆ ಎಂದು ದುಃಖಿಸಿದರು. ಈಗಿನ ಚಿಕಿತ್ಸಾ ಸಮಯ ಕ್ಷಯರೋಗ ಇರುವುದು ಪತ್ತೆಯಾಗಿದ್ದು, ಕ್ಷಯ ರೋಗದ ಚಿಕಿತ್ಸೆಯೂ ಮುಂದುವರಿದಿದೆ.

ಆಸ್ಪತ್ರೆಯ ವೈದ್ಯರು , ಸಿಬ್ಬಂದಿಯವರು ಹಾಗೂ ವಿಶುಶೆಟ್ಟಿ ಅಂಬಲಪಾಡಿಯವರು ರೋಗಿಯನ್ನು ಪತ್ನಿಯ ವಶ ನೀಡಿದರು. ಈ ಕುಟುಂಬದ ಬಡತನದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಪ್ರಯಾಣದ ದಾರಿ ಖರ್ಚು ರೂ. 4000 ನೀಡಿ ಸಹಕರಿಸಿದರು. ವೈದ್ಯರು, ಸಿಬ್ಬಂದಿಗಳು ಹಾಗೂ ವಿಶುಶೆಟ್ಟಿಯವರಿಗೆ ಪತ್ನಿ ಧನ್ಯವಾದ ಸಮರ್ಪಿಸಿ ಪತಿಯೊಂದಿಗೆ ತಮಿಳುನಾಡು ತೆರಳಿದರು.

Previous Post

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್‌ ನ ಹೊಸ ಉತ್ಪಾದನಾ ಘಟಕ ಕಾರ್ಯಾರಂಭ; ಸ್ಥಳೀಯವಾಗಿ ತಯಾರಾಗಿರುವ ಮೊದಲ ವಾಹನ ಜೆಎಲ್‌ಆರ್‌ನ ‘ರೇಂಜ್ ರೋವರ್ ಇವೋಕ್’..!

Next Post

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

ಫೆ.25 ಕಾರ್ಕಳಕ್ಕೆ ಮುಖ್ಯಮಂತ್ರಿ ಭೇಟಿ: ಕಾರ್ಕಳ ಕಾಂಗ್ರೆಸ್ ಪೂರ್ವಭಾವಿ ಸಭೆ

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

ಕಾರ್ಕಳ: ಸ್ವರ್ಣ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮುಳುಗಿ ಸಾವು

30/09/2026
ಉಡುಪಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ಪ್ರಜೆಯ ರಕ್ಷಣೆ: ಗೋವಾ ಪೊಲೀಸರಿಗೆ ಹಸ್ತಾಂತರ

ಉಡುಪಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ರಷ್ಯಾ ಪ್ರಜೆಯ ರಕ್ಷಣೆ: ಗೋವಾ ಪೊಲೀಸರಿಗೆ ಹಸ್ತಾಂತರ

30/09/2026
‘ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸೇವಾ ಪಯಣ ಅಂತ್ಯೋದಯದಿಂದ ಸರ್ವೋದಯದತ್ತ ಸಾಗಿದೆ’ : ಶಾಸಕ ಕಿರಣ್ ಕುಮಾರ್ ಕೊಡ್ಗಿ

‘ಪ್ರಧಾನಿ ನರೇಂದ್ರ ಮೋದಿ 25 ವರ್ಷಗಳ ಸೇವಾ ಪಯಣ ಅಂತ್ಯೋದಯದಿಂದ ಸರ್ವೋದಯದತ್ತ ಸಾಗಿದೆ’ : ಶಾಸಕ ಕಿರಣ್ ಕುಮಾರ್ ಕೊಡ್ಗಿ

29/09/2026
ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ

29/09/2026

Recent News

imunify-bot-check