ಕಾರ್ಕಳ : ಫೆಬ್ರವರಿ 08:ಕಾರ್ಕಳ ತಾಲೂಕಿನ ಕುಕ್ಕುಂದೂರು ಗುತ್ತು ಕರೆಯ ಪಿಲಿಚಂಡಿ, ಬೊಬ್ಬರ್ಯ, ಗುಳಿಗ ಹಾಗೂ ನೀಚ ದೈವಗಳ ನೇಮವು ವರ್ಷಂಪ್ರತಿಯಂತೆ ಶನಿವಾರ ರಾತ್ರಿ ಭಕ್ತಿಭಾವದಿಂದ ನಡೆಯಿತು.
ದಿನಾಂಕ 07-02-2026 ರಂದು ಶನಿವಾರ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೆ ಅನ್ನ ಸಂತರ್ಪಣೆಯ ನಂತರ ದೈವಗಳ ನೇಮ ವಿಜೃಂಭಣೆಯಿಂದ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಸಂತ್ ರಾಜ್ ಗುತ್ತು ಮನೆ, ರವೀಂದ್ರ ಶೆಟ್ಟಿ ಪಡುಮನೆ, ವಿಶ್ವನಾಥ ಶೆಟ್ಟಿ ದುಗ್ಗನಬೆಟ್ಟು ಹಾಗೂ ಕುಕ್ಕುಂದೂರು ಗ್ರಾಮದ ಹತ್ತು ಸಮಸ್ತರು ಮತ್ತು ತಾಲೂಕು ಗುಡ್ಡೆ ಪರಪು ಗುಡ್ಡೆಯವರು ಭಾಗವಹಿಸಿದ್ದರು.
ನೇಮದ ಸಂದರ್ಭದಲ್ಲಿ ಭಕ್ತಾದಿಗಳು ದೈವಗಳ ಸಿರಿ, ಮುಡಿ ಹಾಗೂ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.







