ಉಡುಪಿ ಜ. 28 : ಅಜ್ಜರ ಕಾಡು ಸರಕಾರಿ ಜಿಮ್ಮಿನಲ್ಲಿ ಹಿರಿಯ ಕ್ರೀಡಾಪಟು ಸಂಜೀವ ಬಳ್ಕೂರು ಅವರಿಗೆ ಜಿಮ್ಮಿನ ತರಬೇತುದಾರಾದ ಶ್ರೀ ಉಮೇಶ್ ಮಟ್ಟು ಅವರು ಜಮ್ಮಿನ ಎಲ್ಲಾ ಸದಸ್ಯರ ಪರವಾಗಿ ಜ.28ರಂದು ಮಾಸ್ಟರ್ ಅಥ್ಲೆಟಿಕ್ಸ್ ಮತ್ತು ಮ್ಯಾರಥಾನ್ ಓಟಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದು ಜನವರಿ 18ರಂದು ಟಾಟಾ ಮುಂಬೈ ನಡೆಸಿದ ದೇಶ ಮಟ್ಟದಲ್ಲಿ ಅತ್ಯುನ್ನತ ಹೆಸರಾಂತ ಮ್ಯಾರಥಾನ್ ನಲ್ಲಿ ಭಾಗವಹಿಸಿ ನಾಲ್ಕು ಗಂಟೆ 56 ನಿಮಿಷದಲ್ಲಿ 42 ಕಿ.ಮೀ ಓಡಿ ಸಾಧನೆಯನ್ನು ಮಾಡಿದ್ದಕ್ಕಾಗಿ ಜಿಮ್ಮಿನ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.
ಜಿಮ್ಮಿನ ತರಬೇತುದಾರರಾದ ಉಮೇಶ್ ಮಟ್ಟು ಅವರು ಮಾತನಾಟಿ, ಸಂಜೀವ ಬಳ್ಕೂರು ಅವರು ಈ ಅಪೂರ್ವ ಸಾಧನೆ ಮಾಡಿ ಜಿಮ್ಮಿನ ಬಲಾಢ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಮ್ಮಿನ ಸದಸ್ಯರಾದ ಷ್ರಶಾಂತ್ ಕೋಟ್ಯನ್ ಮಲ್ಪೆ, ಉದಯ್ ಕುಮಾರ್ ಕಲ್ಮಾಡಿ, ಷ್ರಶಾಂತ್ ಜತ್ತನ್, ಎಲ್ಐಸಿ ಯ ಹಿರಿಯ ಅಧಿಕಾರಿ ಆನಂದ್ ಮತ್ತು ದೀಪಕ್ ಕಾಮತ್ , ಸುದಾಕರ್ ಬಿಜೂರು ಹಾಗೂ ಮಹಿಳಾ ಸಧಸ್ಯರು ಹಾಗು ಹಲವಾರು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ಸಂಜೀವ ಬಳ್ಕೂರು ಮಾತನಾಡಿ ಜಿಮ್ಮಿನ ಸದಸ್ಯರೆಲ್ಲರೂ ಐಕ್ಯತೆ ಹಾಗೂ ಸೌಹಾರ್ದತೆಯಿಂದ ಮತ್ತು ಒಗ್ಗಟ್ಟಿನಿಂದ ತಮ್ಮ ತಮ್ಮ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. ಈ ಆಧುನಿಕ ಆಹಾರ ಪದ್ಧತಿಯಿಂದ ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ ಇದನ್ನು ತಾವು ಎಲ್ಲರೂ ಮನಗೊಂಡು ಯಾವುದೇ ರೀತಿಯ ಸಮಸ್ಯೆಗಳಿಗೆ ಎಡ ಮಾಡಿಕೊಡದೆ ಒಗ್ಗಟ್ಟಿನಿಂದ ಈ ಜಮೀನಿನಲ್ಲಿ ನಡೆದುಕೊಳ್ಳಬೇಕು. ಸರಕಾರದಿಂದ ನಡೆಸಲ್ಪಡುವ ಈ ಜಿಮ್ ಅತ್ಯುನ್ನತ ಕ್ರೀಡೋಪಣವನ್ನು ಮತ್ತು ಅತ್ಯುನ್ನತ ತರಬೇತುದಾರರನ್ನು
ಹೊಂದಿದ್ದು ಇದರ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು






