ಬೆಂಗಳೂರು ಜ.28: ಕೆಲ ದಿನಗಳ ಹಿಂದೆ ಬೆಂಗಳೂರಿನ ವಾಯು ಗುಣಮಟ್ಟ 200ರ ಗಡಿ ದಾಟಿದ್ದು ಆತಂಕ ಹುಟ್ಟಿಸಿದ್ದರೂ, ಇಂದು ಬೆಂಗಳೂರಿನಲ್ಲಿ ತಕ್ಕ ಮಟ್ಟಕ್ಕೆ ಸುಧಾರಣೆ ಕಂಡು ಬಂದಿದೆ. ಆದರೆ ಮಂಗಳೂರಿನಲ್ಲಿ ವಾಯು ಗುಣಮಟ್ಟ ಇನ್ನೂ ಕಳಪೆಯಲ್ಲಿದ್ದು, ಬೆಂಗಳೂರಿಗಿಂತಲೂ ಹಿಂತೆಗೆದುಕೊಂಡಿದೆ. ಕೆಲ ದಿನಗಳಿಂದ 100ರ ಸುತ್ತಲೂ ನೆಲೆಸಿದ್ದ ಮಂಗಳೂರಿನ ಏರ್ ಕ್ವಾಲಿಟಿ ಇಂಡೆಕ್ಸ್ (AQI) ಈ ದಿನ ಏಕಾಏಕಿ ಹೆಚ್ಚಳ ಕಂಡಿದ್ದು, ತಜ್ಞರು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ಜನರಿಗೆ ಹೊರಗೆ ಓಡುವಾಗ ಮುಚ್ಚಿದ ಮಾಸ್ಕ್ ಧರಿಸುವುದು, ಹಗುರ ಚಟುವಟಿಕೆಗಳಿಗೆ ಮಿತಿಯನ್ನಿಡುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಸಲಹೆ ನೀಡಲಾಗಿದೆ.
ಏಕಏಕಿ ಏರಿದ AQI
ಬೆಂಗಳೂರಿನ ಏರ್ ಕ್ವಾಲಿಟಿ 163 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೆ ಮಂಗಳೂರಿನ ವಾಯು ಗುಣಮಟ್ಟ 172 ಇದ್ದು, ಒದು ರಾಜಧಾನಿಗಿಂತ ಕಳಪೆಯಾಗಿದೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ
ಬೆಂಗಳೂರು –163
ಮಂಗಳೂರು-172
ಮೈಸೂರು –162
ಬೆಳಗಾವಿ – 118
ಕಲಬುರ್ಗಿ-151
ಶಿವಮೊಗ್ಗ – 160
ಬಳ್ಳಾರಿ – 200
ಹುಬ್ಬಳ್ಳಿ- 134
ಉಡುಪಿ –167
ವಿಜಯಪುರ –150
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300ಅ
ಪಾಯಕಾರಿ – 300 -500+






