ಉಡುಪಿ ಜ.27: ಭಾನುವಾರ ಬೆಳಗ್ಗೆ ಉಡುಪಿ ಹೆಡ್ ಪೋಸ್ಟ್ ಆಫೀಸ್ ಸಮೀಪದ ಸುಮಾರು 8 ಅಡಿ ಆಳದ ಮೆಟ್ಟಿಲಿನಲ್ಲಿ ವೃದ್ಧನೊಬ್ಬ ಅಸ್ವಸ್ಥನಾಗಿ ಕುಸಿದು ಬಿದ್ದ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ನಿತ್ಯಾನಂದ ಒಳಕಾಡು ಅವರು ವೃದ್ಧನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಅವರು ತಮ್ಮ ಹೆಸರು ಹರೀಶ್ ಭಂಡಾರಿ (62), ಮೂಡುಬೆಳ್ಳೆ ನಿವಾಸಿ ಎಂದು ತಿಳಿಸಿದ್ದಾರೆ.
ಕೃಷ್ಣಮಠದಲ್ಲಿ ಭಕ್ತರ ಚಪ್ಪಲಿಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದುದು ತಿಳಿದು ಬಂದಿದೆ. ವೃದ್ಧನ ವಾರಸುದಾರರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.






