ಜ. 26: ದೇಶದ 77ನೇ ಗಣರಾಜ್ಯೋತ್ಸವವನ್ನು ಜೇಸಿ ಇಂಟರ್‌ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭವ್ಯವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಜೇಸಿ ಜಯಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಸ್ವಾಗತಿಸಿದರು.
ಮಹಾತ್ಮ ಗಾಂಧೀಜಿಯವರ ಮತ್ತು ಸವಿಂದಾನ ಶಿಲ್ಪಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಶಾಲಾ ಸಂಚಾಲಕರಾದ ಡಾ. ಮುರಳಿಧರ್ ಭಟ್ ರವರು, ಜೆಸಿಐ ಕಾರ್ಕಳದ ನಿಕಟ ಪೂರ್ವ ಅಧ್ಯಕ್ಷೆ ಜೇಸಿ ಶ್ವೇತಾ ಜೈನ್, ಜೆಸಿಐ ಕಾರ್ಯದರ್ಶಿ ಜೇಸಿ ಸುಶಾಂತ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಯಿನಿ ಶ್ರೀಮತಿ ಸುರೇಖಾ ರಾಜ್ ರವರು, ದೈಹಿಕ ಶಿಕ್ಷಕರಾದ ಪ್ರತಾಪ್, ಗಣಿತ ಶಿಕ್ಷಕರಾದ ಶಂಕರನ್ ರವರು ಹಾಗೂ ಕುಮಾರಿ ಅನನ್ಯ ರವರು ಉಪಸ್ಥಿತರಿದ್ದರು.






