ಮಂಗಳೂರು : ಜನವರಿ 23 : ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಎಲ್ಲರನ್ನು ಬೈಯುತಾ ಹವಾ ಸೃಷ್ಟಿಸಿದ್ದ ನಾಗುರಿ ನಿವಾಸಿಯಾದ ಆಶಾ ಪಂಡಿತ್ ಇವರು ಜನವರಿ 22 ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.
ಆಶಾ ಪಂಡಿತ್ ಇವರು ಬೈಗುಳದ ರೀಲ್,ಚಿತ್ರ ವಿಚಿತ್ರ ರೀಲ್ಸ್ಗಳಿಂದಲೇ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯತೆ ಗಳಿಸಿದ್ದರು. ಅವರು ಪಡೀಲ್ ಬಳಿ ಸಣ್ಣ ಗೂಡಂಗಡಿಯೊಂದನ್ನು ನಡೆಸುತಿದ್ದರು. ನಿನ್ನೆ ರಾತ್ರಿ ವಾಂತಿ ಸಮಸ್ಯೆ ಉಂಟಾಗಿದ್ದು, ನಂತರ ಹೃದಯಾಘಾತಕ್ಕೆ ತುತ್ತಾಗಿ ಅಂಗಳದಲ್ಲಿ ಕುಸಿದು ಬಿದ್ದಿರುತ್ತಾರೆ, ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಕುರಿತು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಹಾಗೂ ಪೋಸ್ಟ್ ಮಾಡಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ.






