
ಉಡುಪಿ :ಜನವರಿ 07: ‘ಉಡುಪಿ ಹಬ್ಬ ’ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ.ಈ ಬಾರಿ ರೋಬೋಟಿಕ್ ಚಿಟ್ಟೆಗಳ ಪ್ರದರ್ಶನವಂತೂ ವಿಶಿಷ್ಟ ಚಿಟ್ಟೆ ಲೋಕ ವನ್ನೇ ಸೃಷ್ಟಿಸಿದೆ

ಅನಿಮ್ಯಾಟ್ರಾನಿಕ್ ಚಿಟ್ಟೆಗಳು, ಡ್ರಾಗನ್‌ಫ್ಲೈಗಳು, ಚೇಳುಗಳು, ಮಿಡತೆ ಸೇರಿದಂತೆ ವಿವಿಧ ಜಾತಿಯ ಆಕರ್ಷಕ, ಅಪರೂಪದ ಚಿಟ್ಟೆಗಳು ಇವೆ.
ಈ ಎಲ್ಲಾ ಜೀವಿಗಳು ಝೇಂಕರಿಸುತ್ತಾ ನೈಜ ಚಿಟ್ಟೆ – ಕೀಟಗಳಂತೆ ವರ್ತಿಸುತ್ತವೆ. ರೋಬೋಟಿಕ್ ಚಿಟ್ಟೆಗಳ ಹಾರಾಟ ಕಣ್ಣಿಗೆ ಹಬ್ಬವನ್ನು ಉಂಟುಮಾಡುತ್ತೆ

ಗೃಹೋಪಯೋಗಿ ವಸ್ತುಗಳು, ಫ್ಯಾನ್ಸಿ ಐಟಂಸ್, ಮಕ್ಕಳ ಆಟೋಟ ವಸ್ತುಗಳು,ಆರ್ಟಿಫಿಶಯಲ್ ಜುವೆಲ್ಲರಿಸ್ ವಸ್ತ್ರಮಳಿಗೆ ಚಪ್ಪಲ್ ಸ್ಟಾಲ್, ಹೀಗೆ ಎಲ್ಲ ಆವಶ್ಯಕತೆ ಒಂದೇ ಸೂರಿನಡಿ.
ಮನೋರಂಜನಾ ಪ್ರಿಯರಿಗಾಗಿ ವಿನ್ಯಾಸಗೊಂಡ 10ಕ್ಕೂ ಅಧಿಕ ಅಮ್ಯೂಸ್‌ಮೆಂಟ್ ಗೇಮ್ಸ್ ಗಳು ಭರಪೂರ ಮನೋರಂಜನೆ ಒದ ಗಿಸುತ್ತಿವೆ.

ಎಲ್ಲಾ ರೀತಿಯ ಶಾಪಿಂಗ್ ಜತೆಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ಸವಿಯುವ ಅವಕಾಶ ಇಲ್ಲಿದೆ. ಪ್ರತೀ ದಿನ ಸಂಜೆ 4 ಗಂಟೆಯಿಂದ 9ರವರೆಗೆ ತೆರೆದುಕೊಳ್ಳುತ್ತಿರುವ ಈ ಹಬ್ಬ ಕುಟುಂಬದ ಪರಿಪೂರ್ಣ ಬಯ ಕೆಯನ್ನು ಒಂದೇ ಸೂರಿನಡಿ ಪೂರೈಸುತ್ತಿದೆ.








