ಮಣಿಪಾಲ :ಜನವರಿ 02, 2026: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಅನ್ನು ಪರಿಚಯಿಸಲು ಸಜ್ಜಾಗಿದೆ, ಇದು ಈ ಪ್ರದೇಶದ ರೋಗಿಗಳಿಗೆ ಸುಧಾರಿತ, ಸಂಘಟಿತ ಲಿವರ್ (ಯಕೃತ್) ಆರೈಕೆಯನ್ನು ಹತ್ತಿರ ತರುವ ಉದ್ದೇಶವನ್ನು ಹೊಂದಿರುವ ಮೀಸಲಾದ ಉಪಕ್ರಮವಾಗಿದೆ. ಈ ಕ್ಲಿನಿಕ್ ಮಂಗಳವಾರ, ಜನವರಿ 06, 2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 4.00 ರವರೆಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಡೆಯಲಿದೆ.
ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯ ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ಜಯಂತ್ ರೆಡ್ಡಿ ಮತ್ತು ಕನ್ಸಲ್ಟೆಂಟ್ ಹೆಪಟಾಲಜಿಸ್ಟ್ ಡಾ. ಶ್ರುತಿ ಎಚ್.ಎಸ್. ರೆಡ್ಡಿ, ಹಾಗೂ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ & ಪ್ರಾಧ್ಯಾಪಕ ಡಾ. ಗಣೇಶ್ ಭಟ್ ಮತ್ತು ಗ್ಯಾಸ್ಟ್ರೋಎಂಟರಾಲಜಿ ಪ್ರಾಧ್ಯಾಪಕ ಡಾ. ಶಿರಣ್ ಶೆಟ್ಟಿ ನೇತೃತ್ವದಲ್ಲಿ, ಈ ಕ್ಲಿನಿಕ್ ನಡೆಯಲಿದ್ದು , ಆರಂಭಿಕ ರೋಗನಿರ್ಣಯ, ಸಕಾಲಿಕ ಚಿಕಿತ್ಸೆ ಮತ್ತು ತಡೆರಹಿತ ದೀರ್ಘಕಾಲೀನ ಆರೈಕೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಮೊದಲ ಬಾರಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಿವರ್ ಕಸಿ ಮೌಲ್ಯಮಾಪನ, ಚಿಕಿತ್ಸಾ ಯೋಜನೆ ಮತ್ತು ರಚನಾತ್ಮಕ ಅನುಸರಣೆ ಸೇರಿದಂತೆ ಲಿವರ್ ಕಸಿ ಸಂಬಂಧಿತ ಸಮಗ್ರ ಸೇವೆಗಳು ಲಭ್ಯವಾಗುತ್ತಿದೆ.
ಈ ಕ್ಲಿನಿಕ್ ಗೆ ಕೊಬ್ಬಿನ ಯಕೃತ್ ( ಲಿವರ್) ಕಾಯಿಲೆ, ದೀರ್ಘಕಾಲದ ಲಿವರ್ ಕಾಯಿಲೆ, ಲಿವರ್ ಸಿರೋಸಿಸ್, ಕಾಮಾಲೆ, ಅಸ್ಸೈಟ್ಸ್, ಲಿವರ್ ಗೆಡ್ಡೆಗಳು ಅಥವಾ ಕ್ಯಾನ್ಸರ್, ಲಿವರ್ ವೈಫಲ್ಯದ ತೊಡಕುಗಳು, ಲಿವರ್ ಕಸಿ ಮೌಲ್ಯಮಾಪನಕ್ಕೆ ಸಲಹೆ ಪಡೆದವರು, ಲಿವರ್ ಅಸ್ವಸ್ಥತೆಗಳಿರುವ ಮಕ್ಕಳು ಮತ್ತು ಲಿವರ್ ಚಿಕಿತ್ಸೆಯ ನಂತರ ಅಥವಾ ಕಸಿ ನಂತರ ಮೇಲ್ವಿಚಾರಣೆಯ ಅಗತ್ಯವಿರುವ ರೋಗಿಗಳು ಹಾಜರಾಗಲು ಪ್ರೋತ್ಸಾಹಿಸಲಾಗುತ್ತದೆ.
ಕರಾವಳಿ ಕರ್ನಾಟಕ, ಉಡುಪಿ, ದಕ್ಷಿಣ ಕನ್ನಡ ಮತ್ತು ನೆರೆ ಜಿಲ್ಲೆಗಳ ರೋಗಿಗಳಿಗೆ ವಿಶೇಷ ಯಕೃತ್ತಿನ ಆರೈಕೆ ಬಲಪಡಿಸುವ ನಿರಂತರ ಪ್ರಯತ್ನಗಳ ಭಾಗವಾಗಿ, ಈ ಕ್ಲಿನಿಕ್ ಆರಂಭಿಸುತ್ತಿದ್ದೇವೆ ಎಂದು ಮಣಿಪಾಲ ಕ್ಲಸ್ಟರ್‌ನ ಸಿ ಓ ಓ ಡಾ. ಸುಧಾಕರ್ ಕಂಟಿಪುಡಿ ಹೇಳಿದ್ದಾರೆ.
ಕ್ಲಿನಿಕ್ ಗೆ ಪೂರ್ವ ಅಪಾಯಿಂಟ್‌ಮೆಂಟ್ ಕಡ್ಡಾಯವಾಗಿದೆ. ಅಪಾಯಿಂಟ್‌ಮೆಂಟ್‌ಗಳು ಮತ್ತು ವಿಚಾರಣೆಗಳಿಗಾಗಿ, 6364469750 ಗೆ ಕರೆ ಮಾಡಬಹುದು ಅಥವಾ www.khmanipal.com ಗೆ ಭೇಟಿ ನೀಡಲು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.








