Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ ಕಾಂಗ್ರೆಸ್ ವತಿಯಿಂದ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ ಹಾಗೂ ಪಂದ್ಯಾಕೂಟ..!!

Dhrishya News by Dhrishya News
30/12/2025
in ಸುದ್ದಿಗಳು
0
ಕಾರ್ಕಳ ಕಾಂಗ್ರೆಸ್ ವತಿಯಿಂದ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ ಹಾಗೂ ಪಂದ್ಯಾಕೂಟ..!!
0
SHARES
10
VIEWS
Share on FacebookShare on Twitter

ಕಾರ್ಕಳ : ಡಿಸೆಂಬರ್ 30:ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ- ಹೆಬ್ರಿ ಮತ್ತು ಯುವ ಕಾಂಗ್ರೆಸ್ ಸಮಿತಿ ಕಾರ್ಕಳ ಆಶ್ರಯದಲ್ಲಿ ಕ್ಷೇತ್ರದ ಕ್ರೀಡಾಪಟುಗಳನ್ನು ಗುರುತಿಸುವ ಮತ್ತು‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕು ವ್ಯಾಪ್ತಿಯ ಸಾರ್ವಜನಿಕರಿಗೆ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ ಹಾಗೂ ಪಂದ್ಯಾಕೂಟವನ್ನು ಜನವರಿ 25, 26 ರಂದು ಸಂಜೆ 4 ಗಂಟೆಯಿಂದ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಲಾಗಿದೆ.

 *ಅಥ್ಲೆಟಿಕ್ ಸ್ಪರ್ಧೆ*

 ಅಥ್ಲೆಟಿಕ್ ಸ್ಪರ್ಧಾ ಕೂಟವು ಹೈಸ್ಕೂಲ್, ಪದವಿ ಪೂರ್ವ, ಪದವಿ, 35 ವರ್ಷ, ಮುಕ್ತ ಮತ್ತು 50 ವರ್ಷ ಮೇಲ್ಪಟ್ಟ ವಿಭಾಗದಲ್ಲಿ 100 ಮೀ, 200ಮೀ,‌ 400ಮೀ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸ್ಪರ್ಧೆಯೊಂದಿಗೆ ನಡೆಯಲಿದ್ದು ಗುರುತು ಚೀಟಿ ಕಡ್ಡಾಯವಾಗಿದೆ. ವಿಜೇತರಿಗೆ ನಗದು, ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

*ಗುಂಪು ಸ್ಪರ್ಧೆ* 

ಗುಂಪು ಸ್ಪರ್ಧೆಯಲ್ಲಿ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್, ಪುರುಷ‌ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ, ಹಾಗೂ ಖೋ ಖೋ ಸ್ಪರ್ಧೆಯು ನಡೆಯಲಿದ್ದು ಜನವರಿ 18 ಒಳಗೆ ನೋಂದಾವಣಿ ಕಡ್ಡಾಯವಾಗಿದೆ. ಎಲ್ಲಾ ವಿಭಾಗದ ವಿಜೇತರಿಗೆ ಪ್ರಥಮ ರೂ15,000, ದ್ವಿತೀಯ10,000 ತೃತೀಯ ‌6,000, ಚತುರ್ಥ 4,000 ಹಾಗೂ ಆಕರ್ಷಕ ಶಾಶ್ವತ ಫಲಕ‌ ನೀಡಿ ಗೌರವಿಸಲಾಗುವುದು.

*ಪಥಸಂಚಲನ*

ಜನವರಿ‌ 25 ಆದಿತ್ಯವಾರ ಸಂಜೆ 4 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ‌ ಮೊದಲು ಗ್ರಾಮೀಣ ತಂಡಗಳಿಂದ ಪಥ ಸಂಚಲನ ನಡೆಯಲಿದ್ದು ಆಕರ್ಷಕ ತಂಡಕ್ಕೆ ಪ್ರಥಮ ರೂ 15,000, ದ್ವಿತೀಯ 10,000, ತೃತೀಯ 5000 ನಗದು ಬಹುಮಾನ ಹಾಗೂ ಶಾಶ್ವತ ಫಲಕ‌ ನೀಡಿ ಪುರಸ್ಕರಿಸಲಾಗುವುದು.

*ಉದ್ಘಾಟನೆಗೆ ಅತಿಥಿ ಗಣ್ಯರು* 

ಕ್ರೀಡಾಕೂಟದ ಉದ್ಘಾಟನೆಯನ್ನು ಕಾಂಗ್ರೆಸ್ ಹಿರಿಯ ಮುಖಂಡರು ಮಾಜಿ‌ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿಯವರು ನಡೆಸಲಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯ ಸರಕಾರ ಉಪ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರುಗಳಾದ, ಸಂತೋಷ್ ಲಾಡ್, ಕೃಷ್ಣ ಬೈರೆಗೌಡ, ಶಾಸಕರಾದ ಮಂಜುನಾಥ್ ಭಂಡಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ,‌ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನಾರಾಯಣ ಗುರು ನಿಗಮ ಅಧ್ಯಕ್ಷಮಂಜುನಾಥ್ ಪೂಜಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ ಎ, ಗಫೂರ್, ಉಡುಪಿ ಉಸ್ತುವಾರಿ ಐವನ್ ಡಿಸೋಜಾ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದು ಕ್ರೀಡಾ ಸಾಧಕರಿಗೆ ಸನ್ಮಾನ‌ ನಡೆಯಲಿದೆ.

ಉಪಸ್ಥಿತಿ: ಕಾಂಗ್ರೇಸ್ ಮುಖಂಡ ಉದಯ್ ಶೆಟ್ಟಿ ‌ಮುನಿಯಾಲು, ಬ್ಲಾಕ್ ಆದ್ಯಕ್ಷರಾದ ಶುಭದರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಯುವಕಾಂಗ್ರೆಸ್ ಅಧ್ಯಕ್ಷ ಸೂರಜ್ ನಕ್ರೆ, ಮಲ್ಲಿಕ್ ಅತ್ತೂರು, ಮಾಜಿ ಪುರಸಭಾ ಅಧ್ಯಕ್ಷರಾದ ಸುಬಿತ್ ಕುಮಾರ್ , ಬ್ಲಾಕ್ ಪ.ಕಾರ್ಯದರ್ಶಿ ವಿವೇಕ್ ಶೆಣೈ .

Previous Post

ಕಾರ್ಕಳವು ಕೇವಲ ಭೌಗೋಳಿಕ ಪ್ರದೇಶವಲ್ಲ; ಸಂಸ್ಕೃತಿ, ಪರಂಪರೆ ಹಾಗೂ ಭಾಷಾ ವೈವಿಧ್ಯತೆಯ ಸಂಗಮಭೂಮಿಯಾಗಿದ್ದು, ಇಲ್ಲಿನ ನೆಲ-ಜಲ-ಜನ ಸಾಹಿತ್ಯಕ್ಕೆ ಸದಾ ಪ್ರೇರಣೆಯಾಗಿವೆ:ವಾಸುದೇವ ಭಟ್..!

Next Post

ಉಡುಪಿ ಶಾಸಕರ WhatsApp ಸಂಖ್ಯೆ ಹ್ಯಾಕ್ :ಗೂಗಲ್ ಪೇ ಮೂಲಕ ಹಣ ಪಾವತಿಸದಂತೆ ಮನವಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಉಡುಪಿ ಶಾಸಕರ WhatsApp ಸಂಖ್ಯೆ ಹ್ಯಾಕ್ :ಗೂಗಲ್ ಪೇ ಮೂಲಕ ಹಣ ಪಾವತಿಸದಂತೆ ಮನವಿ..!!

ಉಡುಪಿ ಶಾಸಕರ WhatsApp ಸಂಖ್ಯೆ ಹ್ಯಾಕ್ :ಗೂಗಲ್ ಪೇ ಮೂಲಕ ಹಣ ಪಾವತಿಸದಂತೆ ಮನವಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಆಸರೆ

ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಕನಸಿಗೆ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಆಸರೆ

22/09/2026
31 ವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಸೇವೆ: ಕಲಾವಿದ ಅನಿಲ್ ಕಾಬೆಟ್ಟು ಅವರಿಗೆ ಸನ್ಮಾನ

31 ವರ್ಷಗಳಿಂದ ನಾಟಕ ಕ್ಷೇತ್ರದಲ್ಲಿ ಸೇವೆ: ಕಲಾವಿದ ಅನಿಲ್ ಕಾಬೆಟ್ಟು ಅವರಿಗೆ ಸನ್ಮಾನ

22/09/2026
ಬೈಂದೂರು: ಪರವಾನಿಗೆ ಇಲ್ಲದೆ ಮದ್ಯ ಸೇವನೆ, ಇಬ್ಬರು ಪರಾರಿ

ಬೈಂದೂರು: ಪರವಾನಿಗೆ ಇಲ್ಲದೆ ಮದ್ಯ ಸೇವನೆ, ಇಬ್ಬರು ಪರಾರಿ

22/09/2026
ಕಡಿಯಾಳಿ ಗಣೇಶೋತ್ಸವ: ಉಡುಪಿ ರಥಬೀದಿಯಲ್ಲಿ ವಿಸರ್ಜನಾ ಮೆರವಣಿಗೆ

ಕಡಿಯಾಳಿ ಗಣೇಶೋತ್ಸವ: ಉಡುಪಿ ರಥಬೀದಿಯಲ್ಲಿ ವಿಸರ್ಜನಾ ಮೆರವಣಿಗೆ

22/09/2026

Recent News

imunify-bot-check