ಉಡುಪಿ:ಡಿಸೆಂಬರ್ 27:ದ್ವಿಚಕ್ರ ವಾಹನ ದಲ್ಲಿ ಮುದರಂಗಡಿಯಿಂದ ತನ್ನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಕುತ್ಯಾರು ಕೇಂಜ ಹಿತ್ಲು ನಿವಾಸಿ ಜೋಸ್ವಿನ್ ಡಿಸೋಜಾ (22) ಮೃತಪಟ್ಟ ಯುವಕ.ಈತ ಮುದರಂಗಡಿಯಲ್ಲಿ ತಡರಾತ್ರಿಯವರೆಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕುತ್ಯಾರಿನ ತನ್ನ ಮನೆಗೆ ಬರುತ್ತಿರುವಾಗ ಕುತ್ಯಾರು ಗೋಳಿಕಟ್ಟೆ ಲಾರೆನ್ಸ್ ಡಿಸೋಜಾ ಅವರ ಮನೆ ಬಳಿ ನಿಯಂತ್ರಣ ತಪ್ಪಿದ ಸ್ಕೂಟರ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ.
ಪರಿಣಾಮ ಗಂಭೀರ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಸೇರಿ ಮಣಿಪಾಲದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಅಂತ್ಯಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 3.30 ಕ್ಕೆ ಮೃತರ ಮೃತದೇಹದ ಕಾರು ನಿವಾಸದಿಂದ ಹೊರಡಲಿದ್ದು, ನಂತರ ಸಂಜೆ 4 ಗಂಟೆಗೆ ಮುದ್ರಂಗಡಿ ಚರ್ಚ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.






