ಕಾರ್ಕಳ: ಡಿಸೆಂಬರ್ 26: ಕ್ಷತ್ರೀಯ ಮರಾಠ ಸಮಾಜ(ರಿ) ಕಾರ್ಕಳ ಇವರ ಆಶ್ರಯದಲ್ಲಿ ಕರಾವಳಿ ಮತ್ತು ಮಲೆನಾಡು ವಲಯ ಸಮಾಜ ಬಂಧುಗಳ ಆಹ್ವಾನಿತ ತಂಡಗಳ ಕ್ರಿಕೇಟ್ ಮತ್ತು ತ್ರೋಬಾಲ್ ಪಂದ್ಯಾಟ *ಕ್ಷತ್ರೀಯ ಮರಾಠ ಟ್ರೋಫಿ-2025* ಜನವರಿ 27 ಮತ್ತು 28 ರಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಅಯೋಜಿಸಲಾಗಿದೆ.
ಕ್ರೀಡಾಕೂಟವನ್ನು ಸಮಾಜದ ಹಿರಿಯರಾದ ಉಮೇಶ್ ರಾವ್ ಚಿರಾಗ್ ಉದ್ಘಾಟಿಸಲಿದ್ದು ಸಮಾಜದ ಅಧ್ಯಕ್ಷರಾದ ಶುಭದರಾವ್ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೆಸರ್ ಗಿರೀಶ್ ರಾವ್, ರಾಜ್ಯ ನಾರಾಯಣಗುರು ಅಬಿವೃದ್ದಿ ನಿಗಮದ ಅದ್ಯಕ್ಷರಾದ ಮಂಜುನಾಥ್ ಪೂಜಾರಿ, ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲು, ಬಿಜೆಪಿ ಕ್ಷೇತ್ರಾದ್ಯಕ್ಷ ನವೀನ್ ನಾಯಕ್, ರವೀಂದ್ರ ಶೆಟ್ಟಿ ಬಜಗೋಳಿ, ಬೋಳ ಪ್ರಶಾಂತ್ ಕಾಮತ್, ಶ್ರೀಮತಿ ಚಂದ್ರಕಲಾ ಜಿ. ರಾವ್, ಪ್ರಕಾಶ್ ಕವಡೆ, ಕೀರ್ತನ್ ಲಾಡ್ ಮತ್ತು ಸಮಾಜದ ಅನೇಕ ಹಿರಿಯರು ಭಾಗವಹಿಸಲಿದ್ದಾರೆ.
ಅದಿತ್ಯವಾರ ಸಂಜೆ ಸಮಾರೋಪ ಸಮಾರಂಭದ ನಡೆಯಲ್ಲಿದ್ದು ವಿಜೇತರಿಗೆ ನಗದು ಬಹುಮಾನ, ಶಾಶ್ವತ ಫಲಕ, ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಸಮಾಜದ ಅಧ್ಯಕ್ಷರಾದ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ






