Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಸೃಷ್ಟಿ ಮಣಿಪಾಲ್ ವಿದ್ಯಾರ್ಥಿಗಳಿಂದ ಭವಿಷ್ಯದ ಮರುಕಲ್ಪನೆ: ಕಲೆ ಮತ್ತು ವಿನ್ಯಾಸದ ಮೂಲಕ ‘ಹೊಸ ಲೋಕ’ ಅನಾವರಣಗೊಳಿಸಿದ ನಾಲ್ಕು ದಿನಗಳ ಪ್ರದರ್ಶನ..!!

Dhrishya News by Dhrishya News
25/12/2025
in ಸುದ್ದಿಗಳು
0
ಸೃಷ್ಟಿ ಮಣಿಪಾಲ್ ವಿದ್ಯಾರ್ಥಿಗಳಿಂದ ಭವಿಷ್ಯದ ಮರುಕಲ್ಪನೆ: ಕಲೆ ಮತ್ತು ವಿನ್ಯಾಸದ ಮೂಲಕ ‘ಹೊಸ ಲೋಕ’ ಅನಾವರಣಗೊಳಿಸಿದ ನಾಲ್ಕು ದಿನಗಳ ಪ್ರದರ್ಶನ..!!
0
SHARES
8
VIEWS
Share on FacebookShare on Twitter

ಬೆಂಗಳೂರು, ಡಿಸೆಂಬರ್ 24 2025 – ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ (SMI) ಡಿಸೆಂಬರ್ 18 ರಿಂದ 21 ರವರೆಗೆ ಆಯೋಜಿಸಿದ್ದ ಕಲಾ ಮತ್ತು ವಿನ್ಯಾಸ ಪ್ರದರ್ಶನಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯ ಮೂಲಕ ಭವಿಷ್ಯವನ್ನು ಮರುರೂಪಿಸುವ ಪ್ರಯತ್ನ ಈ ಪ್ರದರ್ಶನದಲ್ಲಿ ಕಂಡುಬಂದಿತು.  

ಮಣಿಪಾಲ್‌ ಅಕಾಡಿಮಿ ಆಪ್‌ ಹೈಯರ್‌ ಎಜುಕೇಶನ್‌(ಮಾಹೆ) ಬೆಂಗಳೂರು ಕ್ಯಾಂಪಸ್‌ನಲ್ಲಿ ಸೇರಿದಂತೆ ನಗರದ ಎರಡು ಪ್ರಮುಖ ಸ್ಥಳಗಳಲ್ಲಿ ನಡೆದ ಈ ನಾಲ್ಕು ದಿನಗಳ ಕಾರ್ಯಕ್ರಮವು, ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನದ ಮೂಲಕ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು.

ಪ್ರಾಕ್ಟೀಸಸ್ ಆಫ್ ಅಟ್ಯೂನ್‌ಮೆಂಟ್ – ಬಹುಶಿಸ್ತೀಯ ಸಮ್ಮಿಲನ :* ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ (ಬಿಐಸಿ) ಡಿ.18 ಮತ್ತು 19 ರಂದು ನಡೆದ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರದರ್ಶನವು ‘ಪ್ರಾಕ್ಟೀಸಸ್ ಆಫ್ ಅಟ್ಯೂನ್‌ಮೆಂಟ್’ (Practices of Attunement) ಹೆಸರಿನಲ್ಲಿ ಗಮನ ಸೆಳೆಯಿತು. ಸುಮಾರು 70-80 ಎಂ.ಡೆಸ್ (MDes) ಮತ್ತು ಎಂ.ಎ (MA) ವಿದ್ಯಾರ್ಥಿಗಳು ಸಮುದಾಯ, ಹವಾಮಾನ ಬದಲಾವಣೆ, ಇತಿಹಾಸ ಮತ್ತು ನಗರ ವ್ಯವಸ್ಥೆಗಳಂತಹ ಸಮಕಾಲೀನ ವಿಷಯಗಳ ಕುರಿತು ತಮ್ಮ ಸಂಶೋಧನೆ ಮತ್ತು ಕಲಾಕೃತಿಗಳನ್ನು ಪ್ರಸ್ತುತಪಡಿಸಿದರು.

*ಈ ಕುರಿತು ಮಾತನಾಡಿದ ಎಸ್‌ಎಂಐನ ಪ್ರಾಧ್ಯಾಪಕಿ ಡಾ. ಪ್ರಿಯಾ ಜೋಸೆಫ್*, ʼನಮ್ಮ ಸ್ನಾತಕೋತ್ತರ ವಿದ್ಯಾರ್ಥಿಗಳ ಕೃತಿಗಳು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ, ವಿನ್ಯಾಸ, ಕಲೆ ಮತ್ತು ತಂತ್ರಜ್ಞಾನದ ಪದರಗಳನ್ನು ಒಗ್ಗೂಡಿಸಿ ಸಮಕಾಲೀನ ಜಗತ್ತಿಗೆ ಬೇಕಾದ ಪ್ರಬಲ ಸಂದೇಶಗಳನ್ನು ನೀಡಿವೆ. ಬೋಧಕರಾದ ಜತಿನ್ ಗುಲಾಟಿ ಮತ್ತು ಕಾರ್ತಿಕಾ ಶಕ್ತಿವೇಲ್ ಅವರ ನೇತೃತ್ವದಲ್ಲಿ ಮೂಡಿಬಂದ ಈ ಪ್ರದರ್ಶನವು ವಿವಿಧ ದನಿಗಳ ಸಂಗಮವಾಗಿತ್ತುʼ ಎಂದು ವಿವರಿಸಿದರು.

ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ – ಸಾಧ್ಯತೆಗಳ ಸಂಭ್ರಮ:* ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಡಿ. 20 ಮತ್ತು 21 ರಂದು ಪದವಿಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ 

‘ಪ್ರೊಲೋಗ್: ಮೇಕ್ ನ್ಯೂ ವರ್ಲ್ಡ್ಸ್’ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ 11 ವಿಭಿನ್ನ ಕೋರ್ಸ್‌ಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಕಿರುಚಿತ್ರಗಳು, ಅನಿಮೇಷನ್, ನೂತನ ಉತ್ಪನ್ನಗಳು ಹಾಗೂ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆರೋಗ್ಯ, ಶಿಕ್ಷಣ, ಮತ್ತು ನಗರಾಭಿವೃದ್ಧಿ ಕ್ಷೇತ್ರಗಳಲ್ಲಿನ ಭವಿಷ್ಯದ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದರು.

ಎಸ್‌ಎಂಐನ ನಿರ್ದೇಶಕರಾದ *ಡಾ. ಅರಿಂದಮ್ ದಾಸ್* ಅವರು ಮಾತನಾಡಿ, ʼಸೃಜನಶೀಲತೆಯು ಇಂದು ಕೇವಲ ಸೌಂದರ್ಯವರ್ಧನೆಗೆ ಸೀಮಿತವಾಗಿಲ್ಲ. ಅದು ನಮ್ಮ ದೈನಂದಿನ ಜೀವನ, ನಗರಗಳು ಮತ್ತು ಆರ್ಥಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ನಾವು ರೂಪಿಸುತ್ತಿರುವ ಹೊಸ ಪ್ರಪಂಚದ ಕೇಂದ್ರಬಿಂದುವಾಗಿ ಕಲೆ ಮತ್ತು ವಿನ್ಯಾಸಗಳು ಕೆಲಸ ಮಾಡುತ್ತಿವೆʼ ಎಂದು ಅಭಿಪ್ರಾಯಪಟ್ಟರು.  

ಎಸ್‌ಎಂಐನ ಅಸೋಸಿಯೇಟ್ ಡೈರೆಕ್ಟರ್ (ಅಕಾಡೆಮಿಕ್ಸ್) *ರಮೇಶ್ ಕಲ್ಕೂರ್* ಅವರು, ʼನಮ್ಮ ಮಟ್ಟಿಗೆ ಶಿಕ್ಷಣವೆಂದರೆ ಕೇವಲ ವೃತ್ತಿಜೀವನಕ್ಕೆ ಸಿದ್ಧರಾಗುವುದಲ್ಲ, ಭವಿಷ್ಯವನ್ನು ರೂಪಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು. ಭವಿಷ್ಯ ಎಂಬುದು ತಲುಪಬೇಕಾದ ಗುರಿಯಲ್ಲ, ಬದಲಾಗಿ ಹೊಸ ಅವಕಾಶಗಳನ್ನು ನಿರ್ಮಿಸುವ ಮತ್ತು ಸಮುದಾಯಗಳನ್ನು ಬೆಸೆಯುವ ಸತತ ಪ್ರಕ್ರಿಯೆʼ ಎಂದು ಹೇಳಿದರು.

ನಾಲ್ಕು ದಿನಗಳ ಈ ಪ್ರದರ್ಶನದಲ್ಲಿ ಸಾರ್ವಜನಿಕರು ಮತ್ತು ಕಲಾ ಆಸಕ್ತರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ವೈವಿಧ್ಯತೆ ಮತ್ತು ಪ್ರಯೋಗಶೀಲತೆಯನ್ನು ಒಳಗೊಂಡ ಕೃತಿಗಳು ಎಸ್‌ಎಂಐನ ಶೈಕ್ಷಣಿಕ ತತ್ವವನ್ನು ಎತ್ತಿಹಿಡಿದವು.

Previous Post

ಜನವರಿ 3ರಂದು 22ನೇ ವರ್ಷದ ಮಿಯಾರು ಲವ ಕುಶ ಜೋಡು ಕೆರೆ ಕಂಬಳ..!!

Next Post

ಭವಿಷ್ಯದ ತಂತ್ರಜ್ಞಾನ ಕೌಶಲ್ಯ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿದ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭವಿಷ್ಯದ ತಂತ್ರಜ್ಞಾನ ಕೌಶಲ್ಯ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿದ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್..!!

ಭವಿಷ್ಯದ ತಂತ್ರಜ್ಞಾನ ಕೌಶಲ್ಯ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿದ ಸ್ಯಾಮ್‌ಸಂಗ್ ಇನ್ನೋವೇಷನ್ ಕ್ಯಾಂಪಸ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

29/01/2026
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ನಟ ಮಯೂರ್ ಪಟೇಲ್ – ನಾಲ್ಕು ವಾಹನಗಳಿಗೆ ಹಾನಿ..!!

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ನಟ ಮಯೂರ್ ಪಟೇಲ್ – ನಾಲ್ಕು ವಾಹನಗಳಿಗೆ ಹಾನಿ..!!

29/01/2026
ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026

Recent News

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

ದೋಣಿ ದುರಂತದ ಬಳಿಕ ಎಚ್ಚರಿಕೆ: ಅಕ್ರಮ ಪ್ರವಾಸೋದ್ಯಮಕ್ಕೆ ಬ್ರೇಕ್‌, 45 ದಿನಗಳಲ್ಲಿ ನೋಂದಣಿ ಕಡ್ಡಾಯ…!!

29/01/2026
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ನಟ ಮಯೂರ್ ಪಟೇಲ್ – ನಾಲ್ಕು ವಾಹನಗಳಿಗೆ ಹಾನಿ..!!

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ನಟ ಮಯೂರ್ ಪಟೇಲ್ – ನಾಲ್ಕು ವಾಹನಗಳಿಗೆ ಹಾನಿ..!!

29/01/2026
ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved