ಉಡುಪಿ: ಡಿಸೆಂಬರ್ 23:ಬೆಂಗಳೂರಿನ ಜಯನಗರದ ನಂಜನಗೂಡು ಮಂತ್ರಾಲಯ ಮಠದಲ್ಲಿ ಶೀರೂರು ಪರ್ಯಾಯ ಸಮಿತಿಯ ಪದಾಧಿಕಾರಿಗಳು ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರಿಗೆ ಪರ್ಯಾಯ ಆಮಂತ್ರಣ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭ ಪರ್ಯಾಯದ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರುವಂತೆ ಆಶೀರ್ವದಿಸಿದರು.
ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್ ಪಾಲ್ ಸುವರ್ಣ, ಆನಂದ ಬಳಗದ ರಾಮಚಂದ್ರ ಉಪಾಧ್ಯಾಯ,ಕಾರ್ಯದರ್ಶಿ ಮೋಹನ್ ಭಟ್, ವಿಷ್ಣುಮೂರ್ತಿ ಆಚಾರ್ಯ, ಪ್ರಚಾರ ಸಮಿತಿಯ ನಂದನ್ ಜೈನ್ , ಮಧುಕರ್ ಮುದ್ರಾಡಿ, ಮೊದಲಾದವರು ಉಪಸ್ಥಿತರಿದ್ದರು.






