ಶಿರಸಿ : ಡಿಸೆಂಬರ್ 22:ಉತ್ತರ ಕನ್ನಡ ಜಿಲ್ಲೆ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಫೆಬ್ರವರಿ 24 ರಿಂದ ಮಾರ್ಚ್ 4ರವರೆಗೆ ನಡೆಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಜನವರಿ 7ರಿಂದ ಜಾತ್ರೆಯ ಪೂರ್ವ ವಿಧಿ ವಿಧಾನಗಳು ಆರಂಭವಾಗಲಿದೆ. ಫೆಬ್ರವರಿ 24 ರಂದು ದೇವಿಯ ರಥದ ಕಲಶದ ಪ್ರತಿಷ್ಠೆ ಮತ್ತು ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಫೆಬ್ರವರಿ 25ರಂದು ರಥರೋಹಣ ನಡೆಯಲಿದ್ದು, 26 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿರುತ್ತದೆ. ಮಾರ್ಚ್ 4ರಂದು ಜಾತ್ರೆ ಮುಕ್ತಾಯವಾಗಲಿದೆ. ಮಾರ್ಚ್ 19 ರ ಯುಗಾದಿಯಂದು ಪುನರ್ ಪ್ರತಿಷ್ಠಾ ಕಾರ್ಯ ನಡೆಯಲಿದೆ.






