ಉಡುಪಿ:ಡಿಸೆಂಬರ್ 20 :ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ವತಿಯಿಂದ ದಾನಿಗಳ ಸಹಾಯದಿಂದ ಪೆರ್ಣಂಕಿಲ ವರ್ವಾಡಿ ನಿವಾಸಿ ವಿದ್ಯಾಪೋಷಕ್ ವಿದ್ಯಾರ್ಥಿ ವರ್ಷಿತಾ ಇವರಿಗೆ ನಿರ್ಮಿಸಿಕೊಟ್ಟ “ಹರಿಗುರು ಕೃಪಾ” ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೋಡಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೀಪ್ ಮಡಿವಾಳ, ಸದಸ್ಯರಾದ ಸದಾನಂದ ಪ್ರಭು, ದಾನಿಗಳಾದ ಹರೀಶ್ ರಾಯಸ್, ವಾರಿಜಾ ರಮೇಶ್, ರೂಪಾ ಹರೀಶ್, ಶೈಲಜಾ ಶ್ರೀಕಾಂತ್, ಗುರು ಪ್ರಕಾಶ್ ರಾಯಸ್, ಸರಿತಾ ಜಿ ರಾಯಸ್, ಸನತ್ ಕುಮಾರ್, ಅರ್ಚನಾ ಹರೀಶ್ ಹಾಗೂ ಯಕ್ಷಗಾನ ಕಲಾರಂಗ (ರಿ.) ಉಡುಪಿ ಅಧ್ಯಕ್ಷರಾದ ಎಂ. ಗಂಗಾಧರ ರಾವ್, ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್ ಹಾಗೂ ಗಣ್ಯರು ಉಪಸ್ಥಿತರಿದ್ದರು.






