ಉಡುಪಿ: ಡಿಸೆಂಬರ್ 16:ನಿಶ್ಚಿತಾರ್ಥಕ್ಕೆ ಬರಲು ಸಾಧ್ಯವಾಗದ ಕಾರಣ, ವಧು-ವರರು ವಿಡಿಯೋ ಕಾಲ್ ಮುಖೆನ ಎಂಗೇಜ್ಮೆಂಟ್ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ
ಹೌದು ಈ ವಿಷಯ ಅಚ್ಚರಿ ಅನಿಸಿದರೂ ಸತ್ಯ, ಬೆಂಗಳೂರು ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್. ಹಾಗೂ ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ಕುಟುಂಬಗಳ ಸಮ್ಮತಿಯ ಮೇರೆಗೆ ಉಡುಪಿಯ ಸರಸ್ವತಿ ಸಭಾಭವನದಲ್ಲಿ ಆನ್ಲೈನ್ ಮೂಲಕ ನೆರವೇರಿತು.
ವಧು-ವರರಿಬ್ಬರೂ ಕ್ಯಾಮರಾದ ಎದುರು ಪರಸ್ಪರ ಉಂಗುರವನ್ನು ತೋರಿಸಿ, ನಂತರ ತಮ್ಮ ಕೈಗಳಿಗೆ ಉಂಗುರಗಳನ್ನು ಧರಿಸಿದರು. ಸಭಾಭವನದಲ್ಲಿ ನೆರೆದಿದ್ದ ಬಂಧು-ಬಾಂಧವರು ಆರತಿ ಬೆಳಗಿ, ಅಕ್ಷತೆ ಹಾಕಿ ನೂತನ ಜೋಡಿಗೆ ಆಶೀರ್ವಾದ ಮಾಡಿದರು.
ಉಡುಪಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದಾಗ ಬೆಳಿಗ್ಗೆಯ ಸಮಯವಾಗಿತ್ತು, ಆದರೆ ಕೆನಡಾದಲ್ಲಿ ಅದೇ ಸಮಯದಲ್ಲಿ ಮಧ್ಯರಾತ್ರಿ ಆಗಿತ್ತು.
ವರ ಸುಹಾಸ್ ಅವರು ಸದ್ಯ ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಕಾರಣ, ಕಚೇರಿಯಿಂದ ರಜೆ ಸಿಗದೇ ಸಮಾರಂಭಕ್ಕೆ ಹಾಜರಾಗುವುದು ಕಷ್ಟವಾಗಿತ್ತು.




