ಕಾರ್ಕಳ:ಡಿಸೆಂಬರ್ 12:ಶ್ರೀ ವ್ಯಾಸ ಧ್ವಜ ಸಹಿತ ಸಂಕೀರ್ತನಾ ಪಾದಯಾತ್ರೆಯು ಶ್ರೀ ಕಾಶೀ ಮಠ ಸಂಸ್ಥಾನದ ಪರಮಪೂಜ್ಯ ಗುರುವರ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಆರಾಧನೆಯ ಮಂಗಲೋತ್ಸವ ಪ್ರಯುಕ್ತ ದಿನಾಂಕ 12-12-2025 ರಂದು ಸಾಯಂಕಾಲ ಕಾರ್ಕಳ ಶ್ರೀ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಜಯರಾಮ್ ಪ್ರಭು ಆಡಳಿತ ಮೊಕ್ತೇಸರ ರು, ವ್ಯಾಸ ಧ್ವಜ ಸಹಿತ ಸಂಕೀರ್ತನಾ ಪಾದಯಾತ್ರೆ ಗೆ ಚಾಲನೆಯನ್ನು ನೀಡಿದರು.ಕಾರ್ಕಳ, ಶ್ರೀ ವೆಂಕಟರಮಣ ದೇವಸ್ಥಾನದಿಂದ , ಬೈಲೂರು ಶ್ರೀ ರಾಮಮಂದಿರದ ವರೆಗೆ ಶ್ರೀ ವ್ಯಾಸ ಧ್ವಜ ಸಹಿತ ಸಂಕೀರ್ತನಾ ಪಾದಯಾತ್ರೆ ನಡೆಯಿತು. ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರು, ಅರ್ಚಕ ವೃಂದ ದವರು ಆಡಳಿತ ಮಂಡಳಿ ಸರ್ವ ಸದಸ್ಯರು ಜಿ. ಎಸ್. ಬಿ. ಸಮಾಜ ಭಾಂದವರು ಸಂಕೀರ್ತನಾ ಭಜನಾ ಪಾದಯಾತ್ರೆಯಲ್ಲಿ ಭಾಗವಹಿಸಿದರು.
ವರದಿ ಅರುಣ್ ಭಟ್ ಕಾರ್ಕಳ.







