ಕಾರ್ಕಳ: ಡಿಸೆಂಬರ್ 08 :ಡಿಸೆಂಬರ್ 20 ರಂದು ಸಂಜೆ 6:30ಕ್ಕೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ಇರುವ ಶುಭದರಾವ್ ಮನೆಯಲ್ಲಿ ‘ಸಾರ್ವಜನಿಕ ಕೃತಜ್ಞತಾ ಸಭೆ’ಯನ್ನು ಆಯೋಜಿಸಿದ್ದು ಈ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಗೌರವಾರ್ಪಣೆ, ವೃದ್ದಾಶ್ರಮಕ್ಕೆ ಧನಸಹಾಯ ವಿತರಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾವು ಬಂದು ಶುಭಾಶೀರ್ವಾದ ನೀಡುವಂತೆ ಶುಭದರಾವ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ

ಆತ್ಮೀಯರಿಗೆ ಪ್ರೀತಿಯ ಆಮಂತ್ರಣ
ಸಾರ್ವಜನಿಕರ ಸೇವೆಗೆ ನನ್ನ ಬದುಕನ್ನು ಮುಡಿಪಾಗಿಡಬೇಕು ಎನ್ನುವ ಮಹಾದಸೆಯಿಂದ 2007ರಲ್ಲಿ ಕಾರ್ಕಳ ಪುರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದೆ. ಅಂದಿನಿಂದ ಸತತ 18 ವರ್ಷಗಳ ಪುರಸಭೆಯ ಸದಸ್ಯನಾಗಿ, ಒಂದು ವರ್ಷ ಸ್ಥಾಯಿ ಸಮಿತಿಯ ಅಧ್ಯಕ್ಷನಾಗಿ ಸಾರ್ವಜನಿಕ ಸೇವೆಯಲ್ಲಿ ನನ್ನನ್ನು ಸಂಪುರ್ಣವಾಗಿ ತೊಡಗಿಸಿಕೊಂಡು ಜನಪರ ಕೆಲಸ ಹಾಗೂ ಹೋರಾಟವನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಮಾಡುತ್ತಾ ಬಂದಿರುತ್ತೇನೆ.
ಸೇವೆಯ ಸಂದರ್ಭದಲ್ಲಿ ನನ್ನಿಂದ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರವಹಿಸಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ನನ್ನ ಈ ಜವಾಬ್ದಾರಿಯ ಪಯಣದಲ್ಲಿ ಸಹಕರಿಸಿ ಮಾರ್ಗದರ್ಶನ ಮಾಡಿ ಆಶೀರ್ವದಿಸಿದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯವಾಗುತ್ತದೆ.
ಆ ನೆಲೆಯಲ್ಲಿ ಡಿಸೆಂಬರ್ 20 ರಂದು ಸಂಜೆ 6:30ಕ್ಕೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ಇರುವ ನಮ್ಮ ಮನೆಯಲ್ಲಿ ‘ಸಾರ್ವಜನಿಕ ಕೃತಜ್ಞತಾ ಸಭೆ’ಯನ್ನು ಆಯೋಜಿಸಿದ್ದೇನೆ. ಈ ಸಭೆಯಲ್ಲಿ ಪೌರ ಕಾರ್ಮಿಕರಿಗೆ ಗೌರವಾರ್ಪಣೆ, ವೃದ್ದಾಶ್ರಮಕ್ಕೆ ಧನಸಹಾಯ ವಿತರಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾವು ಬಂದು ಶುಭಾಶೀರ್ವಾದ ನೀಡುವಂತೆ ಗೌರವಪೂರ್ವಕ ಮನವಿ
ಶುಭದರಾವ್
ಕಾರ್ಕಳ







