ಮಣಿಪಾಲ್, 04 ಡಿಸೆಂಬರ್ 2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಭಾಗವಾದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಭ್ರೂಣ ವಿಜ್ಞಾನ ವಿಭಾಗದ (ಕ್ಲಿನಿಕಲ್ ಎಂಬ್ರಿಯಾಲಜಿ) ಮುಖ್ಯಸ್ಥ ಡಾ. ಸತೀಶ್ ಕುಮಾರ್ ಅಡಿಗ ಅವರನ್ನು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ‘ರಾಷ್ಟ್ರೀಯ ನೆರವುಸಹಿತ ಸಂತಾನೋತ್ಪತ್ತಿ ತಂತ್ರಜ್ಞಾನ (ಎಆರ್‌ಟಿ) ಮತ್ತು ಬಾಡಿಗೆ ತಾಯ್ತನ ಮಂಡಳಿ’ ತಜ್ಞ ಸದಸ್ಯರನ್ನಾಗಿ ನೇಮಕ ಮಾಡಿದೆ.
ರಾಷ್ಟ್ರೀಯ ಎಆರ್‌ಟಿ ಮತ್ತು ಬಾಡಿಗೆ ತಾಯ್ತನ ಮಂಡಳಿಯು, ದೇಶಾದ್ಯಂತ ಈ ಮೂಲಕ ನಡೆಯುವ ಸೇವೆಗಳ ಮೇಲೆ ನಿಗಾವಹಿಸುವ ಅತ್ಯುನ್ನತ ಪ್ರಾಧಿಕಾರವಾಗಿದೆ. ಈ ಸೇವೆಗಳು ಸುರಕ್ಷಿತ, ನೈತಿಕ ಹಾಗೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವುದು ಮಂಡಳಿಯ ಪ್ರಮುಖ ಜವಾಬ್ದಾರಿಯಾಗಿದೆ. ಇದಲ್ಲದೆ, ಈ ವಿಚಾರದಲ್ಲಿ ನೀತಿ ನಿರೂಪಣೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವುದು, ಎಆರ್‌ಟಿ ಕ್ಲಿನಿಕ್‌ಗಳು ಮತ್ತು ವೀರ್ಯ ಘನೀಕರಣ ಬ್ಯಾಂಕ್‌ಗಳನ್ನು ನಿಯಂತ್ರಣ ಹಾಗೂ ಮೇಲ್ವಿಚಾರಣೆ ನಡೆಸುವುದು, ಮಾನದಂಡಗಳನ್ನು ಮತ್ತು ನೀತಿ ಸಂಹಿತೆಗಳನ್ನು ರೂಪಿಸುವುದು, ತಂತ್ರಜ್ಞಾನದ ದುರುಪಯೋಗವನ್ನು ತಡೆಯುವುದು, ರೋಗಿಗಳ ಹಕ್ಕುಗಳನ್ನು ರಕ್ಷಿಸುವುದು ಹಾಗೂ ಈ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜಿಸುವುದಾಗಿದೆ.
ಡಾ. ಅಡಿಗ ಅವರು ಐವಿಎಫ್ ಎಂಬ್ರಿಯಾಲಜಿ, ಬಂಜೆತನ ನಿವಾರಣಾ ಚಿಕಿತ್ಸೆ ಹಾಗೂ ಗುಣಮಟ್ಟ ನಿರ್ವಹಣಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಐವಿಎಫ್ ತರಬೇತಿ, ಸಂಶೋಧನೆ ಹಾಗೂ ಎಆರ್‌ಟಿ ಚಿಕಿತ್ಸೆಯಲ್ಲಿ ಜಾಗತಿಕ ಮಟ್ಟದ
ಅತ್ಯುತ್ತಮ ಪದ್ಧತಿಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಡಾ. ಅಡಿಗ ಅವರ ಆಯ್ಕೆಯು, ʼಮಾಹೆಯು ವೈದ್ಯಕೀಯ ಶ್ರೇಷ್ಠತೆ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತೋರುತ್ತಿರುವ ಬದ್ಧತೆಗೆ ಸಿಕ್ಕ ಪ್ರತಿಫಲʼ ಎಂದು ಹರ್ಷ ವ್ಯಕ್ತಪಡಿಸಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾಗಿದೆ. ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ಸ್ಟ್ರೀಮ್‌ಗಳಾದ್ಯಂತ ಮಣಿಪಾಲ, ಮಂಗಳೂರು, ಬೆಂಗಳೂರು, ಜೆಮ್‌ಷೆಡ್‌ಪುರ ಮತ್ತು ದುಬೈನಲ್ಲಿರುವ
2 / 2
ತನ್ನ ವಿದ್ಯಾಸಂಸ್ಥೆಗಳ ಮೂಲಕ 400 ವಿಶೇಷತೆಗಳನ್ನು ನೀಡುತ್ತದೆ. ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಕೊಡುಗೆಗಳಲ್ಲಿ ಗಮನಾರ್ಹವಾದ ದಾಖಲೆಯೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 3ನೇ ಸ್ಥಾನದಲ್ಲಿದೆ. ಪರಿವರ್ತಕ ಕಲಿಕೆಯ ಅನುಭವ ಮತ್ತು ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟೀಯ ಮತ್ತು ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗೆ ಮಾಹೆಯು ಅತ್ಯತ್ತಮ ಶಿಕ್ಷಣ ಸಂಸ್ಥೆಯಾಗಿದೆ








