ಉಡುಪಿ :ಡಿಸೆಂಬರ್ 01:ಸೃಷ್ಟಿ ನೃತ್ಯ ಕಲಾ ಕುಟೀರ (ರಿ.), ಉಡುಪಿ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆ ಕುಮಾರಿ ಎಸ್ ಅನಗಶ್ರೀ ಅವರು ನವೆಂಬರ್ 30 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರಂಗ ಪ್ರವೇಶ ಮಾಡಿದರು

ಅನೇಕ ವರ್ಷಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಫಲವನ್ನು ಪ್ರಪಂಚದ ಮುಂದೆ ಪ್ರದರ್ಶಿಸುವ ದಿನವೂ ಅದಾಗಿತ್ತು. ಗಾಯಕರು, ವಾದಕರ ಸಮ್ಮುಖದಲ್ಲಿ ಅವರ ಸಂಗೀತಕ್ಕೆ ಒಗ್ಗೂಡುವಂತೆ ತಾಳ, ಲಯ, ಭಾವ, ಇತ್ಯಾದಿ ಅನೇಕ ಅಂಶಗಳ ಜ್ಞಾನವನ್ನು ವೇದಿಕೆ ಮೇಲೆ ಪ್ರದರ್ಶಿಸುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಡಾ ಕ್ರಪಾ ಫಡಕೆ ಸಂಸ್ಥಾಪಕರು ಮತ್ತು ನಿರ್ದೇಶಕರು, ನಿರ್ತ್ಯಗಿರಿ, ಮೈಸೂರು,ಶ್ರೀಮತಿ. ಸಾಯಿಕೃಪಾ ಪ್ರಸನ್ನ ಕಲಾತ್ಮಕ ನಿರ್ದೇಶಕರು, ಕೃಪಾಸ್ ಸೆಂಟರ್ ಫಾರ್ ಫೈನ್ ಆರ್ಟ್ಸ್, ಚೆನ್ನೈ,ಗೌರವ ಅತಿಥಿಗಳಾಗಿ ಶ್ರೀಮತಿ ಮಾಲತಿ ದೇವಿ ಪ್ರಾಂಶುಪಾಲರು, ಎಂಜಿಎಂ ಪಿಯು ಕಾಲೇಜು, ಉಡುಪಿ ಭಾಗವಹಿಸಿ ಶುಭ ಹಾರೈಸಿದರು

ಶ್ರೀಮತಿ. ಲಕ್ಷ್ಮಿ ಪ್ರಿಯಾ ರಾಜಾಮಾತೃಕಾ, ಚೆನ್ನೈ. ಶ್ರೀಮತಿ. ದೀಪ್ತಿ ರೋಹನ್ ಮಸೂರ್ಕರ್ ನೃತ್ಯಾಂಜಲಿ ದಿ ಡ್ಯಾನ್ಸ್ ಕಲ್ಚರ್, ನವಿಮುಂಬೈ ವಿಶೇಷ ಆಹ್ವಾನಿತರಾಗಿ ಅಭಿನಂದನೆ ಸಲ್ಲಿಸಿದರು
ಕಾರ್ಯಕ್ರಮದ ಕುರಿತು ಮಾತನಾಡಿದ ಗಣ್ಯರು ಕುಮಾರಿ ಎಸ್ ಅನಗಶ್ರೀ ಅವರ ಗುರುಗಳಾದ ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್ ಅವರ ಜೊತೆಗೆ ಅವರ ಪೋಷಕರಾದ ಶ್ರೀಮತಿ. ವಿಜಯಲಕ್ಷ್ಮಿ ಮತ್ತು ಶ್ರೀ ಸುದರ್ಶನ್ ಅವರುಗಳನ್ನು ಅಭಿನಂದಿಸಿದರು

ಹಿಮ್ಮೆಳದಲ್ಲಿ, ನಟುವಂಗಂ, ಶ್ರೀಮತಿ ಮಂಜರಿ ಚಂದ್ರ ಪುಷ್ಪರಾಜ್,ಗಾಯನ, ವಿದ್ವಾನ್ ಬಾಲಸುಬ್ರಮಣ್ಯಂ ಶರ್ಮಾ, ಮೃದಂಗ ವಿದ್ವಾನ್ ಕಾರ್ತಿಕ್ ವೈಧಾತ್ರಿ, ಪಿಟೀಲು, ವಿದ್ವಾನ್ ಮಾಥುರ್ ಶ್ರೀನಿಧಿ, ಕೊಳಲು, ವಿದ್ವಾನ್ ನಿತೀಶ್ ಅಮ್ಮಣ್ಣಾಯ, ರಿದಮ್ ಪ್ಯಾಡ್ ಶ್ರೀ ಸುರೇಶ್ ಲಕ್ಷ್ಮೀನಗರ ಸಹಕರಿಸಿದರು
ದಾಮೋದರ ಶರ್ಮಾ ಕಾರ್ಯಕ್ರಮ ನಿರೂಪಿಸಿದರು









