ಕಾರ್ಕಳ,:ನವೆಂಬರ್ 26 : ಅತಿಶಯ ಕ್ಷೇತ್ರ ಶಿರ್ಲಾಲು ಭಗವಾನ್ ಶ್ರೀ ಅನಂತನಾಥ ಸ್ವಾಮಿ ಮಹಾಮಾತೆ ಪದ್ಮಾವತಿ ಅಮ್ಮನವರ ಬಸದಿ ಯ ಪುನರ್ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮವು ನವಂಬರ್ 26ರಂದು ನಡೆಯಲಿದೆ ಎಂದು ಅಧ್ಯಕ್ಷರಾದ ಡಾಕ್ಟರ್ ಮಹಾವೀರ ಜೈನ ಹೇಳಿದರು.
ಅವರು 24ರಂದು ನಡೆದ ಪತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ಎರಡೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಬಸದಿಗೆ ಸರಕಾರದಿಂದ 50 ಲಕ್ಷ ರೂಪಾಯಿ ಅನುದಾನ ದೊರೆಯಲಿದೆ ಎಂದು ಹೇಳಿದರು.
ಶಿಲನ್ಯಾಸ ಕಾರ್ಯಕ್ರಮದಲ್ಲಿ ಕಾರ್ಕಳ ಜೈನ ಮಠದ ಸ್ವಸ್ತಿ ಶ್ರೀಲಲಿತ ಕೀರ್ತಿ ಪಟ್ಟಾರಕ ಸ್ವಾಮೀಜಿ,ಅಂತಿ ಪುರ ಜೈನಮಠದ ಸಿದ್ಧಾಂತ ಕೀರ್ತಿ ಬಟ್ಟಾರಕ ಪಕ್ಕಾಚಾರ್ಯವರ್ಮ ಸ್ವಾಮೀಜಿ,ಧರ್ಮಸ್ಥಳ ಧರ್ಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗ್ಗಡೆ ದಕ್ಷಿಣಕನ್ನಡ ಕೇಂದ್ರ ಸಹಕಾರಿ ಅಧ್ಯಕ್ಷ ಡಾಕ್ಟರ್ ಎಂ ಎನ್ ರಾಜೇಂದ್ರ ಕುಮಾರ್ ಮಾಜಿ ಸಚಿವ ಅಬಯಚಂದ್ರ ಜೈನ್, ಹಾಗೂ ಉದ್ಯಮಿ ನಾಭಿರಾಜ ಜೈನ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.
1947 ರ ಲ್ಲಿ ಜೀರ್ಣೋದ್ಧಾರಗೊಂಡಿದ್ದ ಬಸದಿಯು 2004 ರಲ್ಲಿ ದಾ ಮ ಸಂಪ್ರೋ ಕ್ಷಣೆ ನಡೆದಿದ್ದು ಈಗ ಸಂಪೂರ್ಣವಾಗಿ ರಾಜಸ್ತಾನಿ ಶಿಲೆಯಿಂದ ನಿರ್ಮಾಣವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಡಾಕ್ಟರ್ ಮಹಾವೀರ ಜೈನ್ ಸುದರ್ಶನ ಅತಿ ಕಾರಿ ಹಿರಿಯರಾದ ಅನಂತರಾಜ ಪೊವಣಿ, ಹಾಗೂ ಉಪಾಧ್ಯಕ್ಷ ಸನತ್ ಕುಮಾರ್ ಉಪಸ್ಥಿತರಿದ್ದು ಸುದರ್ಶನ್ ಸ್ವಾಗತಿಸಿ ವಂದಿಸಿದರು
ವರದಿ ಅರುಣ್ ಭಟ್ ಕಾರ್ಕಳ








