ಉಡುಪಿ: ನವೆಂಬರ್ 14: ತಿರುವಾಂಕೂರು ರಾಜ ಮನೆತನದ ರಾಜಕುಮಾರ ಆದಿತ್ಯ ವರ್ಮ ಗುರುವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದರು. ಬಳಿಕ ಗೀತಾ ಮಂದಿರದಲ್ಲಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರನ್ನು ಭೇಟಿಯಾಗಿ, ತಮ್ಮ ಆಡಳಿತದ ತಿರುವನಂತಪುರದ ಶ್ರೀಅನಂತಪದ್ಮನಾಭಸ್ವಾಮಿ ದೇವಸ್ಥಾನದ ವಾರ್ಷಿಕ ದೀಪೋತ್ಸವಕ್ಕೆ ಆಹ್ವಾನ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿ ಕಾರ‍್ಯಕ್ರಮದ ವಿವರಗಳುಳ್ಳ ಮಾಹಿತಿ ಪತ್ರವನ್ನು ಅನಾವರಣಗೊಳಿಸಿದರು.
ಪುತ್ತಿಗೆ ಶ್ರೀಪಾದರು ಅವರನ್ನು ಅನುಗ್ರಹಿಸಿ, ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನೀಡಿ ಗೌರವಿಸಿದರು.
ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಶ್ರೀಮಠದ ವತಿಯಿಂದ ಬರಮಾಡಿಕೊಂಡರು.






