ಕಾರ್ಕಳ :ನವೆಂಬರ್ 10 :ಕಾರ್ಕಳ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನದ ಲಕ್ಷ ದಿಪೋತ್ಸವ ಪ್ರಯುಕ್ತ ದೇವಾಲಯದಲ್ಲಿ ಭಾಂಡಿ ಉತ್ಸವದ ನಂತರ ದೇವಸ್ಥಾನದ ಶೇಷ ತೀರ್ಥ ಕೆರೆಯಲ್ಲಿ ಕೆರೆ ದೀಪೋತ್ಸವ ನಡೆಯಿತು. ಕಾಶೀ ಮಠಾಧೀಶರಾದ ಶ್ರೀ ಸಂಯಂಮೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು ನೆರೆದ ಭಕ್ತಾದಿಗಳನ್ನು ಆಶೀರ್ವದಿಸಿದರು.
