ಉಡುಪಿ: ನವೆಂಬರ್ 10:ಮಣಿಪಾಲ ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟಿನಲ್ಲಿರುವ ವೆಸ್ಟ್‌ಸೈಡ್ ಸ್ಟೋರ್‌ನಲ್ಲಿ ಸೇಫ್ ಲಾಕರ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ನಗದು ಕಳವಾದ ಘಟನೆ ನಡೆದಿದೆ.
ಅ. 22ರಂದು ವ್ಯವಹಾರ ಮುಗಿದ ಅನಂತರ ರಾತ್ರಿ 10ಕ್ಕೆ ವ್ಯವಸ್ಥಾಪಕರಾದ ಪ್ರಕಾಶ್ ಹಾಗೂ ಭದ್ರತಾ ಸಿಬಂದಿ ರಕ್ಷಿತ್ ಅವರು ಸ್ಟೋರ್ ಬಾಗಿಲು ಮುಚ್ಚಿದ್ದರು.
ಅ. 23ರಂದು ಬೆಳಗ್ಗೆ ವ್ಯವಸ್ಥಾಪಕರಾದ ಪುಷ್ಪಲತಾ ಹಾಗೂ ಭದ್ರತಾ ಸಿಬಂದಿ ದೀಪ್ತಿ ಅವರು ಬಾಗಿಲನ್ನು ತೆರೆದು ಸೇಫ್ ಲಾಕರ್ ಅನ್ನು ಕೀರ್ತಿ ಮತ್ತು ಪುಷ್ಪಲತಾ ಅವರು ತೆರೆದು ನೋಡಿದಾಗ ಅದರಲ್ಲಿಟ್ಟಿದ್ದ 10,10,336 ರೂ. ಕಳವಾಗಿತ್ತು. ಅನಂತರ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಅ. 22ರಿಂದ 23ರ ನಡುವಿನ ದೃಶ್ಯಗಳು ನಾಪತ್ತೆಯಾಗಿದ್ದವು. ಈ ಅವಧಿಯಲ್ಲಿ ಸ್ಟೋರ್‌ನ ಒಳಗೆ ಅಥವಾ ಹೊರಗೆ ಕೆಲಸ ಮಾಡಿಕೊಂಡಿರುವ ಯಾರೋ ಲಾಕರ್‌ನಿಂದ ಕಳವು ಮಾಡಿರುವ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಆಪರೇಷನ್ಸ್ ವಿಭಾಗದ ಮ್ಯಾನೇಜರ್ ಸಂದೇಶ್ ಶೇರಿಗಾರ್ ಅವರು ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.








