ಕಾರ್ಕಳ:ನವೆಂಬರ್ 09: ಕಾರ್ಕಳ ತಾಲೂಕಿನ ಅಜೆಕಾರು ಮೊಗಂಟೆಯ ನಿವಾಸಿ ಹಾಗೂ ಸೆಲ್ಕೋ ಸೊಲಾರ್‌ನ ಕಾರ್ಕಳದ ಪ್ರತಿನಿಧಿ ಪುನೀತ್ ಕುಮಾರ್ ಶೆಟ್ಟಿ (38) ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನವೆಂಬರ್ 08ರಂದು ನಿಧನರಾದರು.
ಇವರಿಗೆ ಶುಕ್ರವಾರ ರಾತ್ರಿ ಹೃದಯಘಾತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಅವರು ನಿಧನರಾದರು.
ಪುನೀತ್ ಶೆಟ್ಟಿ ಅವರು ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಸರಕಾರಿ ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೌರ ವಿದ್ಯುತ್ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯಾಗಿದ್ದು, ಅವರ ಅಕಾಲಿಕ ನಿಧನದಿಂದ ಪ್ರದೇಶದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.








