ಕಾರ್ಕಳ:ನವೆಂಬರ್ 08:ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯಕ್ತ ನಡೆದ ಸಂಸ್ಥಾಪಕರ ದಿನಾಚರಣೆಯಂದು ಕಾಲೇಜಿನ ಯಕ್ಷಗಾನ ಕೇಂದ್ರದಿಂದ “ಜಾಂಬವತಿ ಕಲ್ಯಾಣ”ವೆಂಬ ಯಕ್ಷಗಾನ ಪ್ರಸಂಗವು ಆಸಕ್ತ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟಿತು.
ಶ್ರೀ ಮೋಹನ್ ಆಚಾರ್ಯ, ಕಲ್ಲಂಬಾಡಿ ಇವರ ಭಾಗವತಿಕೆಯೊಂದಿಗೆ, ಚೆಂಡೆಯಲ್ಲಿ ಶ್ರೀ ಆನಂದ ಗುಡಿಗಾರ್ ಕಾರ್ಕಳ, ಚಕ್ರತಾಳದಲ್ಲಿ ವಿಖ್ಯಾತ್ ಮಿಯಾರು, ಮದ್ದಳೆ ಹಾಗೂ ಚಕ್ರತಾಳದಲ್ಲಿ ರಾಮಕೃಷ್ಣ ಕಾಮತ್ ಹಾಗೂ ದ್ವಿತೀಯ ಬಿ.ಸಿ.ಎ.ಯ ವಿಕಾಸ್ ಉಪಸ್ಥಿತರಿದ್ದರು.
ಕಥಾಸಾರದ ಪಾತ್ರವರ್ಗದಲ್ಲಿ ಶ್ರೀರಾಮ ಹಾಗೂ ಬೇಟೆಗಾರನಾಗಿ ಅಂತಿಮ ಬಿ.ಕಾಂ.ನ ರಕ್ಷಣ್, ಸತ್ಯಜಿತನಾಗಿ ಅಂತಿಮ ಬಿಕಾಂ.ನ ಧವಳ್, ಪ್ರಸೇನನಾಗಿ ದ್ವಿತೀಯ ಬಿ.ಎಸ್ಸಿಯ ಸ್ಮೃತಿ, ಸಿಂಹವಾಗಿ ಅಂತಿಮ ಬಿ.ಕಾಂ.ನ ತ್ರಿಷಾಲ್, ವರಾಹವಾಗಿ ಪ್ರಥಮ ಬಿ.ಕಾಂ.ನ ಶ್ರೇಯಸ್, ಮೊದಲ ಜಾಂಭವನಾಗಿ ,ಅಂತಿಮ ಬಿಎಸ್ಸಿಯ ಪೂಜಾ, ಎರಡನೆಯ ಜಾಂಬವನಾಗಿ, ಅಂತಿಮ ಬಿ.ಸಿ.ಎ.ಯ ಪ್ರಜಕ್ತಾ, ಪ್ರಥಮಾರ್ಧ ಕೃಷ್ಣನಾಗಿ ಪ್ರಥಮ ಪಿಯುಸಿ ಕಾಮರ್ಸ್ ನ ಆಶ್ರಿತಾ, ದ್ವಿತೀಯಾರ್ಧ ಕೃಷ್ಣನಾಗಿ,ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದ ಸನ್ನಿಧಿ, ಚಾರುಚಂದ್ರ ಪಾತ್ರದಲ್ಲಿ ದ್ವಿತೀಯ ಬಿ ಎಸ್ಸಿಯ ಶ್ರಾವ್ಯ, ಬಾನುವಾಗಿ ಪ್ರಥಮ ಬಿ.ಕಾಂ.ನ ಸುಶಾಂತ್, ಸುಬಾನುವಾಗಿ ಪ್ರಥಮ ಪಿಯುಸಿ ಕಾಮರ್ಸ್ ನ ಸಮೃದ್ಧ್, ಜಾಂಬವತಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಶ್ರೀರಕ್ಷಾ, ನಾರದನಾಗಿ ದ್ವಿತೀಯ ಪಿಯುಸಿ ಕಾಮರ್ಸ್ ನ ವೈಷ್ಣವಿ, ಸೇನಾಧಿಪತಿಯಾಗಿ ಪ್ರಥಮ ಪಿಯುಸಿ ಕಾಮರ್ಸ್ ವಿಭಾಗದ ಅನಿರುದ್ಧ, ಮಂತ್ರಿಯಾಗಿ ಪ್ರಥಮ ಬಿ.ಕಾಂ.ನ ನಿಶಾಂತ್, ಪ್ರಥಮ ಬಿ.ಕಾಂ.ನ ಅನುಜ್ ಮತ್ತು ಸಾತ್ವಿಕ್ ಬೇಟೆಗಾರರಾಗಿ ಪಾತ್ರವರ್ಗದಲ್ಲಿ ಮಿಂಚಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಶ್ರೀಮತಿ ವನಿತಾ ಶೆಟ್ಟಿ ಇವರ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ ಗುರುಗಳಾಗಿ ಶ್ರೀ ಸತೀಶ್ ಮಡಿವಾಳ ತರಬೇತಿಯನ್ನು ನೀಡಿರುತ್ತಾರೆ.
ವರದಿ ಅರುಣ್ ಭಟ್ ಕಾರ್ಕಳ








