ಮಂಗಳೂರು : ನವೆಂಬರ್ 07: ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29) ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ.
ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು.
ವಾಮಂಜೂರು ತಿರುವೈಲುಗುತ್ತು ಕಂಬಳವನ್ನು ಅತ್ಯಂತ ಶಿಸ್ತುಬದ್ಧ ಕಂಬಳ ಎಂದು ಹೆಸರು ಮಾಡುವಲ್ಲಿ ಅಭಿಷೇಕ್ ಆಳ್ವ ಪ್ರಮುಖ ಪಾತ್ರವಹಿಸಿದ್ದರು.
ಬುಧವಾರ ತನ್ನ ಸ್ನೇಹಿತರೊಂದಿಗೆ ಊಟ ಮುಗಿಸಿ ತೆರಳಿದ್ದ ಅಭಿಷೇಕ್ ಅವರು, ಬಳಿಕ ನಾಪತ್ತೆಯಾಗಿದ್ದರು. ಗುರುವಾರ ಸಂಜೆ ಮೂಲ್ಕಿ ಬಪ್ಪನಾಡು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು. ಆ ಬಳಿಕ ಅಭಿಷೇಕ್ ನಾಪತ್ತೆ ಬಗ್ಗೆ ಪಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.








