ಅಕ್ಟೋಬರ್ 24: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ, ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.
ನೈಋತ್ಯ ರೈಲ್ವೆ ನವೆಂಬರ್ 2 ರಿಂದ ಡಿಸೆಂಬರ್ 15 ರ ವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ.
ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಮೊದಲು ನವೆಂಬರ್ 01 ರವರೆಗೆ ರದ್ದುಗೊಂಡಿತ್ತು. ಇದೀಗ ನವೆಂಬರ್ 08 ರಿಂದ ಡಿಸೆಂಬರ್ 13ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16575 ಯಶವಂತಪುರ–ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಮೊದಲು ಅಕ್ಟೋಬರ್ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 02 ರಿಂದ ಡಿಸೆಂಬರ್ 14ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಮೊದಲು ಅಕ್ಟೋಬರ್ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 03 ರಿಂದ ಡಿಸೆಂಬರ್ 15ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್ಪ್ರೆಸ್ ಮೊದಲು ಅಕ್ಟೋಬರ್ 01ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 04 ರಿಂದ ಡಿಸೆಂಬರ್ 16ರ ವರೆಗೆ ರದ್ದುಗೊಳ್ಳಲಿದೆ.








