ಉಡುಪಿ : ಅಕ್ಟೋಬರ್ 22:ಉಡುಪಿಯ ಸುತ್ತಮುತ್ತ ಯಾವುದೇ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೂವಿನ ಮಾರಾಟಕ್ಕಾಗಿ ಹೊರ ಜಿಲ್ಲೆಗಳಿಂದ ವ್ಯಾಪಾರಸ್ಥರು ಬರುತ್ತಾರೆ ಈ ಬಾರಿ ದೀಪಾವಳಿ ಪ್ರಯುಕ್ತ ಹೊರ ಜಿಲ್ಲೆಯ ಹಲವು ಮಾರಾಟಗಾರರು ಕಳೆದ ಮೂರು ದಿನಗಳಿಂದ ಠಿಕಾಣಿ ಹೂಡಿ ಹೂ ಮಾರಾಟ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಎಸೆದಿರುವ ಹಾಳಾದ ಹೂವನ್ನು ತಂಡವೊಂದು ಸಂಗ್ರಹಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ನಗರದ ಮಾರುಥಿ ವೀಥಿಕಾದಲ್ಲಿ ಕಂಡುಬಂದಿತು.
ಸಾರ್ವಜನಿಕರಿಂದ ಮಾಹಿತಿ ಪಡೆದ ಸಮಾಜಸೇವಕ ನಿತ್ಯಾನಂದ ಒಳಕಾಡು, ಹೂವು ಮಾರಾಟಗಾರರನ್ನು ತರಾಟೆ ತೆಗೆದುಕೊಂಡು ವ್ಯಾಪಾರವನ್ನು ನಿಲ್ಲಿಸಿದರು.
ಮಳೆ ಬಂದ ಕಾರಣ ಹೂವು ವ್ಯಾಪಾರ ಕುಸಿತ ಕಂಡ ಕಾರಣ ಕೆಲವು ವ್ಯಾಪರಿಗಳು ಹೂವುಗಳನ್ನು ಸಾರ್ವಜನಿಕರು ಮೂತ್ರಬಾಧೆ ತಿರಿಸಿಕೊಳ್ಳುವ ಸ್ಥಳದಲ್ಲಿ ಎಸೆದುಹೋಗಿದ್ದರು. ಮತ್ತೊಂದು ವ್ಯಾಪಾರಿ ತಂಡದವರು ಆ ಹೂವುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ








