ಕಾರ್ಕಳ:ಅಕ್ಟೋಬರ್ 17 :ಜಮೀಯತುಲ್ ಫಲಾಹ್ ಕಾರ್ಕಳ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಸಾಲ್ಮರದ ಜಾಮಿಯ ಮಸೀದಿ ವಾಣಿಜ್ಯ ಸಂಕೀರ್ಣದಲ್ಲಿರುವ ಜಮೀತುಲ್ ಫಲಾಹ್ ದ ಘಟಕದ ಕಾರ್ಯಾಲಯದಲ್ಲಿ ಜರುಗಿತು.
ಮಾಜಿ ಅಧ್ಯಕ್ಷರು, ಹಾಗೂ ಕೇಂದ್ರಸಮಿತಿಯ ಅಧ್ಯಕ್ಷರಾದ ಅಶ್ಪಾಕ್ ಅಹಮದ್ ರವರು ಕಾರ್ಕಳ ನೂತನ ಅಧ್ಯಕ್ಷರಾದ ಮೊಹಮ್ಮದ್ ಗೌಸ್ ರವರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸೈಯದ್ ಅಬ್ಬಾಸ್ ಅಂಚಿಕಟ್ಟೆ, ಅಬ್ದುಲ್ ರಶೀದ್ ಬಂಗ್ಲೆ ಗುಡ್ಡೆ, , ಜೊತೆ ಕಾರ್ಯದರ್ಶಿ ಶೇಕ್ ನಾಸಿರ್ ಬೈಲೂರು, ಸಂಘಟನಾ ಕಾರ್ಯದರ್ಶಿ ಸೈಯದ್ ಹಸನ್, ಹಾಗೂ ಮಾಜಿ ಉಪಾಧ್ಯಕ್ಷ ಸೈಯದ್ ಮೊಹಮ್ಮದ್ ಕಾಸಿಂ, ಮಾಜಿ ಕೋಶ ಧಿಕಾರಿಯಾದ ಮೊಹಮ್ಮದ್ ಯಾಕೂಬ್ ಸಾಹೇಬ್,ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು








