ಉಡುಪಿ, ಅಕ್ಟೋಬರ್.15:ಉಡುಪಿಯ ಇಂದ್ರಾಳಿ ಮೇಲ್ವೇತುವೆ ಲೋಕಾರ್ಪಣೆಯ ಪ್ರಯುಕ್ತವಾಗಿ ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಹರ್ಷೋತ್ಸವ ಕಾರ್ಯಕ್ರಮವು ಅಕ್ಟೋಬರ್ 14ರಂದು ನಡೆಯಿತು.
ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಕಾಮಗಾರಿ ಆರಂಭ ದಿಂದ ಹಿಡಿದು ಕಾಮಗಾರಿ ಪೂರ್ಣಗೊಳ್ಳುವ ತನಕ ಬಹಳಷ್ಟು ಸಲ ಹೋರಾಟವನ್ನು ಮಾಡಿಕೊಂಡು ಬಂದಿರುತ್ತದೆ
ಸಹಭಾಗಿತ್ವ ವಹಿಸಿದ್ದ ಉಡುಪಿಯ ಜಹಾಂಗೀರ್ ಭಟ್ಸ್ ಸ್ವೀಟ್ಸ್ ಹೌಸ್, ಹಾಗೂ ವೇದಾಂತ್ ವೆಜ್ ರೆಸ್ಟೋರೆಂಟಿನ ನುರಿತ ಸಿಹಿ ಖಾದ್ಯತಜ್ಞರು ಸ್ಥಳದಲ್ಲಿಯೇ ತಯಾರಿಸಲಾದ 4 ಸಾವಿರ ಜೀಲೆಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶಾಸಕ ಯಶಪಾಲ್ ಸುವರ್ಣ, ಡಿವೈಎಸ್ಪಿ ಡಿ.ಟಿ ಪ್ರಭು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ನಾಗರೀಕ ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ 80 ಬಡಗುಬೆಟ್ಟು ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ.ಬಾಲಗಂಗಾಧರ್ ರಾವ್, ತಾರಾನಾಥ್ ಮೇಸ್ತ ಶಿರೂರು, ಸತೀಶ್ ಕುಮಾರ್, ಯಾದವ್, ಜಯಶ್ರೀ, ಅಶ್ವಿನಿ, ಪ್ರಶಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.








