ಉಡುಪಿ: ಅಕ್ಟೋಬರ್ 13 :ಬೀಡಿ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಗೊಳಿಸಲು ಒತ್ತಾಯಿಸಿ ದ.ಕ ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಗಳ ಜಂಟಿ ಕ್ರೀಯಸಮಿತಿ ನೇತ್ರತ್ವದಲ್ಲಿ ತಾರೀಖು 7/10/25. ರಿಂದ117/10/25 ವರೆಗೆ ಎರಡು ಜಿಲ್ಲೆಯ ಎಲ್ಲಾ ಕಂಪನಿಯ ಮುಂದೆ ಹಕ್ಕೊತ್ತಾಯ ಚಳುವಳಿ ಗೆ ಕರೆ ನೀಡಿದ್ದು ಉಡುಪಿಯಲ್ಲಿ ಭಾರತ್ ಬೀಡಿ ಕಂಪನಿ ಮುಂದೆ ಬೀಡಿ ಕಾರ್ಮಿಕರು 2018 ರಿಂದ2024 ವರೆಗೆ ಬಾಕಿ ಇರುವ ಕನಿಷ್ಟ ಕೂಲಿ 40 ರೂಪಾಯಿ,ತುಟ್ಟಿಭತ್ಯೆ ಈ ಕೂಡಲೇ ಕಾರ್ಮಿಕರಿಗೆ ನೀಡಬೇಕೆಂದು ಒತ್ತಾಯಿಸಿ ಹಕ್ಕೊತ್ತಾಯ ಚಳುವಳಿ ಮಾಡಿದರು.



AITUC ಬೀಡಿ ಸಂಘದ ಕೋಶಾಧಿಕಾರಿ ವಿ.ಶೇಖರ್ ,ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (CITU) ಅಧ್ಯಕ್ಷ ರಾದ ಮಹಾಬಲಹೋಡೆಯರ ಹೋಬಳಿ,ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ,ಪ್ರಧಾನವಾಗಿ ಪ್ರತಿಭಟನಾ ಸಭೆಯಲ್ಲಿ ಮಾತಾನಾಡಿದರು ನಂತರ ಉಡುಪಿ ಜಿಲ್ಲಾಬೀಡಿ ಫೆಡರೇಶನ್ ಕೋಶಾಧಿಕಾರಿ ಕವಿರಾಜ್. ಎಸ್.ಕಾಂಚನ್ ಮಾತಾನಾಡಿ ಧನ್ಯವಾದ ನೀಡಿದರು.
ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಶಶಿಧರ ಗೊಲ್ಲ,ಮೋಹನ್,ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಮುಂಖಡರಾದ ಬಲ್ಕೀಸ್,ನಳಿನಿ.ಎಸ್,ಗಿರಿಜ,AITUC ಸಂಘದ ಮುಖಂಡರಾದ ಶಶಿಕಲಾ, ಮಮತಾ ಉಪಸ್ಥಿತರಿದ್ದರು ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಣೆ ಬೀಡಿ ಫೆಡರೇಶನ್ ನ ಕಾರ್ಯದರ್ಶಿ ಉಮೇಶ್ ಕುಂದರ್ ಮಾಡಿದರು.








