ಉಡುಪಿ:ಅಕ್ಟೋಬರ್ 10:ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್, (ಸಿಐಟಿಯು)ನೇತ್ರತ್ವದಲ್ಲಿ ಇಂದು ಕಾರ್ಮಿಕ ಮಂತ್ರಿಯಾದ ಸಂತೋಷ ಲಾಡ್ ಅವರನ್ನು ಭೇಟಿ ಯಾಗಿ ಬೀಡಿ ಕಾರ್ಮಿಕರ ಕನಿಷ್ಠ ಕೂಲಿ,ತುಟ್ಟಭತ್ಯೆ ಹಾಗೂ ಇನ್ನಿತರ ಸಮಸ್ಯೆ ಕುರಿತು ಮನವಿ ನೀಡಿ ಚರ್ಚೆ ನಡೆಸಲಾಯಿತು ನಂತರ ಸಚಿವರು ಮಾತಾನಾಡಿ ಬೀಡಿ ಕಾರ್ಮಿಕರ ಸಮಸ್ಯೆ ಕುರಿತು ಪ್ರತ್ಯೇಕ ಅಜೆಂಡಾ ಇಟ್ಟು ಕಾರ್ಮಿಕ ಸಂಘದ ಜೊತೆ ಜಂಟಿ ಸಭೆ ಮಾಡುವ ಭರವಸೆ ನೀಡಿದರು.
ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ,ಪ್ರಸಾದ್ ಕಾಂಚನ್ ,ಎಮ್.ಎ.ಗಪೂರ್ ಜೊತೆಗೆ ಇದ್ದರು.ನಿಯೋಗದಲ್ಲಿ ಬೀಡಿ ಫೆಡರೇಶನ್ ಕಾರ್ಯದರ್ಶಿ ಉಮೇಶ್ ಕುಂದರ್,ಕೋಶಾಧಿಕಾರಿ ಕವಿರಾಜ್. ಎಸ್.ಕಾಂಚನ್,ಮುಖಂಡರಾದ ನಳಿನಿ.ಎಸ್.ಕಂಟ್ರಾಕ್ಟರ್ ಯುನಿಯನ್ ಮುಖಂಡರಾದ ಕ್ರಷ್ಣ ರೈ,ರವಿಪೂಜಾರಿ ಉಪಸ್ಥಿತರಿದ್ದರು








