ಉಡುಪಿ:ಅಕ್ಟೋಬರ್ 08:ಸುಬ್ರಹ್ಮಣ್ಯ ಮೂಲದ ಪರ್ಯಾಯ ಶ್ರೀ ಪುತ್ತಿಗೆ ಮಠದ ಅಧಿಕಾರಿಗಳಲ್ಲಿ ಒಬ್ಬರಾದ ಅನಂತಕೃಷ್ಣ ಪ್ರಸಾದ (45) ಅವರು ಅ . 7 ರಂದು ರಥಬೀದಿಯ ಶ್ರೀ ರಾಘವೇಂದ್ರ ಮಠ ಪರಿಸರದಲ್ಲಿ ಕುಸಿದು ಬಿದ್ದು ನಿಧನ ಹೊಂದಿದರು .
ಮೃತರು ತಂದೆ , ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ .
ನಿತ್ಯವೂ ಸಂಜೆ ಶ್ರೀಕೃಷ್ಣನ ದರ್ಶನ ಪಡೆದು ಅನಂತರ ರಥಬೀದಿಯಾಗಿ ಶ್ರೀ ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಮಾಡುತ್ತಿದ್ದರು . ಅ .7 ರ ಸಂಜೆ ಕೃಷ್ಣದರ್ಶನ ಮುಗಿಸಿ ರಾಘವೇಂದ್ರ ಮಠಕ್ಕೆ ಬಂದಾಗ ಅದೇ ಪರಿಸರದಲ್ಲಿ ಕುಸಿದು ಬಿದ್ದರು . ಕೂಡಲೇ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿದಾಗ ಅವರು ಕೂಡಲೇ ಆಗಮಿಸಿ ಆಸ್ಪತ್ರೆಗೆ ದಾಖಲಿಸಿದ್ದರು . ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು .








