ಉಡುಪಿ : ಅಕ್ಟೋಬರ್ 03:ಆಟೋ ರಿಕ್ಷಾ ಮತ್ತುಸ್ಟ್ಯಾಂಡ್‌ಗಳಿಗೆ ಸಂಬಂಧ ಹೊಸ ನಡವಳಿ ಜಾರಿಯಾಗಿದ್ದು ರಿಕ್ಷಾ ಚಾಲಕರು ಪಾಲಿಸಲೇಬೇಕಾದ ನಿಯಮಗಳ ಬಗ್ಗೆ ಮಾಹಿತಿ ಇಲ್ಲಿದೆ
ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಡವಳಿಗಳನ್ನು ಮಂಡಿಸಲಾಗಿದೆ.
ಉಡುಪಿ ನಗರದಲ್ಲಿ ಅಟೋ ರಿಕ್ಷಾ ವಾಹನಗಳಿಗೆ ವಲಯ 1 ಹಾಗೂ ವಲಯ 2 ಎಂದು ವರ್ಗಿಕರಿಸಲಾಗಿದೆ. ವಲಯ 1 ರಲ್ಲಿರುವ ಅಟೋ ರಿಕ್ಷಾಗಳು ಉಡುಪಿ ನಗರದ ವ್ಯಾಪ್ತಿಯೊಳಗೆ ಮಾತ್ರ ಸಂಚರಿಸಬೇಕು. ಆದರೆ ಯಾವ ಸ್ಟ್ಯಾಂಡ್‌ಗಳಲ್ಲಿ ಯಾವ ಆಟೋ ನಿಲ್ಲಿಸಬೇಕು ಎಂಬುದರ ಬಗ್ಗೆ, ಆಟೋ ರಿಕ್ಷಾ ಚಾಲಕರುಗಳ ಮಧ್ಯೆಯೇ ವಿವಾದ ಉಂಟಾಗಿ ದಿನ ನಿತ್ಯ ಅವರವರೇ ಗಲಾಟೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಈಗಾಗಲೇ 5 ಪ್ರಕರಣ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಉಡುಪಿ ನಗರದಲ್ಲಿ ಈಗಾಗಲೇ ಒಟ್ಟು 41 ಅಧಿಕೃತ ಅಟೋ ರಿಕ್ಷಾ ಸ್ಟ್ಯಾಂಡ್‌ಗಳನ್ನು ಗುರುತಿಸಲಾಗಿದೆ. ಇದಲ್ಲದೇ 17 ಅನಧಿಕೃತ ಸ್ಟ್ಯಾಂಡ್ ಗಳಿವೆ. ಸದ್ಯ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸಲು ಎಲ್ಲಾ ಆಟೋ ಸ್ಟ್ಯಾಂಡ್‌ಗಳಲ್ಲಿ ನಿಲ್ಲುತ್ತಿರುವ/ ಚಾಲನೆ ಆಗುತ್ತಿರುವ ಆಟೋಗಳ ಸಂಖ್ಯೆ ಇತ್ಯಾದಿಗಳ ಬಗ್ಗೆ ವಿವರವಾದ ವರದಿಯನ್ನು ಪೊಲೀಸ್ ಅಧೀಕ್ಷಕರು ನೀಡಿದ್ದು, ವಿವರವಾಗಿ ಚರ್ಚಿಸಿ ಕೆಳಕಂಡಂತೆ ನಿರ್ಣಯಗಳನ್ನು ತೆಗೆದು ಕೊಂಡು, ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್ ಗಳಲ್ಲಿ ಪಾಲಿಸಬೇಕಾದ ನೀತಿಯನ್ನು ಈ ಕೆಳಗಿನಂತೆ ಆದೇಶಿಸಿದೆ.
a) ಸದರಿ ನೀತಿ ನಗರಸಭೆ ಉಡುಪಿ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
b) ಸದ್ಯ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 58 (41 ಅಧಿಕೃತ ಹಾಗೂ 17 ಅನಧಿಕೃತ) ಸ್ಯಾಂಡ್ ಗಳನ್ನು ಗುರುತಿಸಿ ಅಧಿಕೃತ ಎಂದು ಘೋಷಿಸಿದೆ. (List in Appendix)
c) ಆಟೋ ಸ್ಯಾಂಡ್‌ಗಳು ನಗರಸಭಾ ಪ್ರದೇಶದ ವ್ಯಾಪ್ತಿಯ ಜಾಗದಲ್ಲಿ ಇರುವುದರಿಂದ, ಆಟೋಗಳನ್ನು ನಿಲ್ಲಿಸುವ ಬಗ್ಗೆ ಸ್ಯಾಂಡ್ ಪರ್ಮಿಟನ್ನು ಉಡುಪಿ ನಗರಸಭೆಯೇ ಹಂಚಿಕೆ ಮಾಡಬೇಕಾಗಿರುತ್ತದೆ.
d) ಆಟೋ ಚಾಲಕನ ಸೀಟ್‌ನ ಹಿಂಬದಿಯಲ್ಲಿ ಚಾಲಕನ ಹೆಸರು, ಆಟೋ ಸ್ಟ್ಯಾಂಡ್ ಹೆಸರು, ಆಟೋ ನೊಂದಣಿ ಸಂಖ್ಯೆ, ಮೊಬೈಲ್ ನಂಬ್ರ ಪ್ರಯಾಣಿಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶನ (Display) .
e) ಅಟೋರಿಕ್ಷಾದ ಹಿಂದುಗಡೆ ನಗರಸಭೆಯು ನೀಡಿದ ವಲಯ ಮತ್ತು ಸ್ಟ್ಯಾಂಡ್‌ನ ಹೆಸರನ್ನು ಕಾಣುವಂತೆ ನಮೂದಿಸಬೇಕು.
f) ಉಡುಪಿ ನಗರ ವ್ಯಾಪ್ತಿಯಲ್ಲಿ ವಲಯ 1 ಪರವಾನಿಗೆ ಇರುವ ರಿಕ್ಷಾಗಳಿಗೆ ಮಾತ್ರ ಅವಕಾಶ ಕೊಡುವುದು.
9) ಈಗಾಗಲೇ ಅಟೋ ಸ್ಟಾಂಡ್‌ಗಳನ್ನು ಬಳಸುತ್ತಿರುವ ರಿಕ್ಷಾ ಚಾಲಕರು ಆರ್.ಟಿ.ಓ ರವರಿಗೆ ಅರ್ಜಿ ಕೊಟ್ಟು, ಅಲ್ಲಿಂದ ಶಿಫಾರಸ್ಸು ಬಂದ ನಂತರ ಉಡುಪಿ ನಗರ ಸಭೆಯಿಂದ ತ್ವರಿತವಾಗಿ ಸ್ಯಾಂಡ್ ಪರ್ಮಿಟ್ ಪಡೆದುಕೊಳ್ಳುವುದು.
h) ಯಾವುದೇ ಅಟೋ ಸ್ಟ್ಯಾಂಡ್ ಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಗಮನಿಸಿ, ಪರಿಶೀಲಿಸಿ ಅದರ ಆಧಾರದಲ್ಲಿ ಸ್ಟ್ಯಾಂಡ್ ಪರ್ಮಿಟ್ ಕೊಡುವುದು. ಇದರ ಬಗ್ಗೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರು ನಿರ್ಧಾರ ತೆಗೆದುಕೊಳ್ಳುವುದು.
i) ಹೊಸ ಸ್ಯಾಂಡ್ ಗುರುತಿಸುವ ಕುರಿತು ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯವರ ಜಂಟಿ ವರದಿ/ ಶಿಫಾರಸ್ಸಿನಂತೆ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯತಕ್ಕದ್ದು.
j) ಒಂದು ಅಟೋ ರಿಕ್ಷಾದವರಿಗೆ ಒಂದಕ್ಕಿಂತ ಹೆಚ್ಚು ಆಟೋ ಸ್ಟ್ಯಾಂಡ್ ಪರ್ಮಿಟ್ ನೀಡುವಂತಿಲ್ಲ.
k) ರಾತ್ರಿ 11-00 ಗಂಟೆಯಿಂದ ಬೆ 04-00 ಯವರೆಗೆ ವಲಯ 1 ರ ಯಾವುದೇ ಚಾಲಕರು, ವಲಯ 1 ರ ಯಾವುದೇ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಬಹುದು.
1) ಸದ್ಯ ಬಳಸುವ ರಿಕ್ಷಾಗಳಲ್ಲದೆ ಹೆಚ್ಚುವರಿ ಹೊಸದಾಗಿ ರಿಕ್ಷಾಗಳಿಗೆ ಸ್ಟ್ಯಾಂಡ್ ಪರ್ಮಿಟ್ ಕೊಡ ಬೇಕಾದರೆ ಸಾರಿಗೆ ಇಲಾಖೆಯವರು ಅರ್ಜಿ ಸ್ವೀಕರಿಸಿ Random ಆಗಿ ಲಾಟ್ ನಲ್ಲಿ ಚೀಟಿ ತೆಗೆದು ಸ್ಯಾಂಡ್ ಪರ್ಮಿಟ್ ನೀಡುವುದು.
m) ಸಾರಿಗೆ ಇಲಾಖೆಯ ಶಿಫಾರಸ್ಸು ಇಲ್ಲದೆ ಯಾವುದೇ ಸ್ಕ್ಯಾಂಡ್ ಪರ್ಮಿಟ್ ಅವಕಾಶ ಇರುವುದಿಲ್ಲ. ಸಾರಿಗೆ ಇಲಾಖೆಯವರ ಶಿಫಾರಸು ಮಾಡಿದ ನಂತರ ನಗರಸಭೆಯವರು ಕಡ್ಡಾಯವಾಗಿ ಪರ್ಮಿಟ್ ನೀಡಬೇಕು.
n) ಪ್ರತಿ ವರ್ಷ ಕಡ್ಡಾಯವಾಗಿ ವಾಹನದ ಅರ್ಹತಾ ಪತ್ರ, ವಾಹನದ ದಾಖಲಾತಿ, ಇನ್ನಿತರ ದಾಖಲಾತಿಗಳನ್ನು ನಗರಸಭೆಗೆ ಹಾಜರುಪಡಿಸಿ ಸ್ಯಾಂಡ್ ಪರ್ಮಿಟನ್ನು ನವೀಕರಣ ಮಾಡಿಸಿಕೊಳ್ಳುವುದು.
o) ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ರಿಕ್ಷಾ ಸ್ಟ್ಯಾಂಡ್‌ಗಳಲ್ಲಿ ಹೆಚ್ಚಿನ ಸದಸ್ಯರನ್ನು ಸೇರಿಸಿಕೊಳ್ಳಬೇಕಾದಲ್ಲಿ ಉಡುಪಿ ನಗರ ಸಭೆ ವ್ಯಾಪ್ತಿಯವರಿಗೆ ಮೊದಲ ಆದ್ಯತೆ ನೀಡುವುದು. ಈಗಾಗಲೇ ಆಟೋ ಸ್ಟ್ಯಾಂಡ್‌ನಲ್ಲಿ ವಲಯ -1 ಪರ್ಮಿಟ್ ಇರುವವರಿಗೆ ಅದೇ ಸ್ಟ್ಯಾಂಡ್‌ನಲ್ಲಿ ಸ್ಟ್ಯಾಂಡ್ ಪರ್ಮಿಟ್ ನೀಡುವುದು
p) ಸದ್ಯ ಇರುವ ವಲಯ 1ರಲ್ಲಿ ಇರುವ ಆಟೋ ಸ್ಟ್ಯಾಂಡ್ ಗಳನ್ನು ವಲಯ-2ನೇಯವರು ಬಳಸುತ್ತಿದ್ದಲ್ಲಿ ಎರಡು ತಿಂಗಳೊಳಗೆ ವಲಯ-1 ರ ಪರವಾನಿಗೆಯನ್ನಾಗಿ ಪರಿವರ್ತಿಸಿ ಕೊಳ್ಳುವುದು. ಎರಡು ತಿಂಗಳೊಳಗೆ ಪರವಾನಿಗೆಯನ್ನಾಗಿ ಪರಿವರ್ತಿಸಿಕೊಳ್ಳದೆ ಇದ್ದಲ್ಲಿ ಅಂತವರಿಗೆ ವಲಯ-1ರಲ್ಲಿನ ಸ್ಟ್ಯಾಂಡ್‌ಗಳನ್ನು ಬಳಸಲು ಅವಕಾಶ ಇರುವುದಿಲ್ಲ.








