ಉಡುಪಿ, ಸೆ. 30: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ‘ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪುರೋಹಿತ ಗಣೇಶ್ ಸರಳಾಯ, ವೇಮೂ ವಿಖ್ಯಾತ್ ‘ ನೇತೃತ್ವದಲ್ಲಿ ನೆರವೇರುತ್ತಿರುವ ನವರಾತ್ರಿ ಮಹೋತ್ಸವ ಅಂಗವಾಗಿ ಅ.2ರಂದು ವಿಜಯದಶಮಿ ಪರ್ವಕಾಲದಲ್ಲಿ ಕ್ಷೇತ್ರದ ವತಿಯಿಂದ ಬಹು ವಿಶೇಷವೂ, ಅಪರೂಪವೂ ಆದ ತ್ರಿಶಕ್ತಿ ಮಹಾಯಾಗ ಸಮರ್ಪಣೆಗೊಳ್ಳಲಿದೆ.
ಯಾಗವು ಬೆಳಗ್ಗೆೆ 7.30ಕ್ಕೆೆ ಸಾಮೂಹಿಕ ಪ್ರಾಾರ್ಥನೆಯೊಂದಿಗೆ ಏಕಕಾಲದಲ್ಲಿ ಮೂರು ಕುಂಡಗಳಲ್ಲಿ ಆರಂಭ ವಾಗಲಿದೆ. ಏಕಕಾಲದಲ್ಲಿ ಮೂರು ಕುಂಡಗಳಲ್ಲಿಯೂ 10.30ಕ್ಕೆೆ ಪೂರ್ಣಾಹುತಿ ಕಾಣಲಿದೆ. ವಿವಿದ ಪೂಜೆ, ಆರಾದ‘ನೆಗಳ ಬಳಿಕ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನೆರವೇರಲಿದೆ. ಅಂದು ಸಂಜೆ ಬಲಿ ಉತ್ಸವ ಸಹಿತ ಶ್ರೀರಂಗ ಪೂಜಾ ಮಹೋತ್ಸವ, ಪಲ್ಲಕಿ ಉತ್ಸವ, ವಸಂತ ಪೂಜೆ ನಂತರ ಮಹಾಮಂತ್ರಾಕ್ಷತೆ,ಅನ್ನಸಂತರ್ಪಣೆ ಜರಗಲಿದೆ.ಅ.3ರಂದು ಮಹಾ ಸಂಪ್ರೋೋಕ್ಷಣೆ ನೆರವೇರಲಿದೆ.
ಯಾಗ ದ್ರವ್ಯ ಸಮರ್ಪಣೆಗೆ ಅವಕಾಶ
ಯಾಗದ ಪೂಣಾಹುತಿಯಲ್ಲಿ ಪ್ರಮುಖವಾಗಿ ಸೀರೆ, ಕಬ್ಬು, ಎಳ್ಳು, ತಾವರೆ, ಮಾದ್ರಲ, ಬಿಲ್ವಪತ್ರೆೆ, ತುಪ್ಪ, ಮೊಸರು, ಹಾಲು, ಸಾಸಿವೆ, ತೆಂಗಿನಕಾಯಿ, ಅರಳು, ಕೇಸರಿ, ಗುಗ್ಗಳ, ಅಗರು, ಗಂ‘, ಬಾಳೆಹಣ್ಣು. ಅರಶಿನ, ಕುಂಕುಮ, ಸಿಂಗಾರದ ಹೂವು, ಕೇಪಳ ಹೂವು, ಗರಿಕೆ ಹುಲ್ಲು, ಪಚ್ಚ ಕರ್ಪೂರ ಸಮರ್ಪಿಸಲಾಗುತ್ತದೆ. ಇಲ್ಲಿ ಸಮರ್ಪಿಸುವ ಸೇವೆಯಿಂದ ನಿಶ್ಚಿಿತ ಲ ನಿಶ್ಚಯ ಎಂದು ಮನಗಾಣುವ ‘ಕ್ತರು ಮತ್ತೊೊಮ್ಮೆ ತಮ್ಮ ಸೇವೆಯನ್ನು ನಿರಂತರವಾಗಿರಿಸಿಕೊಂಡ ನೆಲೆಯಲ್ಲಿ ನವರಾತ್ರಿ ದಶಮಿಯ 10 ದಿನಗಳ ಕಾಲ 21 ಚಂಡಿಕಾಯಾಗಗಳು, ಜೋಡಿ ದುರ್ಗಾ ನಮಸ್ಕಾಾರ ಪೂಜೆ, ಜೋಡಿ ಲಲಿತಾ ಸಹಸ್ರ ಕದಳಿಯಾಗಗಳು ಸಮರ್ಪಿಸಲ್ಪಡುತ್ತಿದೆ. ಯಾಗಕ್ಕೆೆ ಸಮರ್ಪಿಸುವ ದ್ರವ್ಯವನ್ನು ನೀಡುವವರು ಕ್ಷೇತ್ರವನ್ನು ಸಂಪರ್ಕಿಸಿ ದೇವರ ಕೃಪೆಗೆ ಪಾತ್ರರಾಗಲು ಅವಕಾಶವಿದೆ ಎಂದು ಕೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.








