ಕಾರ್ಕಳ, ನಿಟ್ಟೆ 11ನೇ ವರ್ಷದ ಶಾರದಾ ಪೂಜಾ ಮಹೋತ್ಸವ ದಿನಾಂಕ 27 ಮತ್ತು 28 ರಂದು ಸ್ಥಳ ನಲ್ಕೆದ ಬೆಟ್ಟು ಬಾಕಿಮಾರ್ ವೇದಿಕೆ. ಶಾರದಾ ದೇವಿಯ ವಿಗ್ರಹವನ್ನು ದಿನಾಂಕ 27 ಶನಿವಾರದಂದು ನಿಟ್ಟೆಕಾಲೇಜು ಬಳಿಯಿದ ನಾಲ್ಕೆದಬೆಟ್ಟು ವರೆಗೆ ಪೂರ್ಣ ಕುಂಭ ಕಲಶ ಮೆರವಣಿಗೆ ನಡೆಯಿತು.

ನಂತರ ಶಾರದೆಯ ಪ್ರತಿಷ್ಟಾಪನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ,ದಿನಾಂಕ 28ರವಿವಾರದಂದು ಪ್ರಾತಕಾಲ ಪೂಜೆ,ವಿವಿಧ ಭಜನಾ ತಂಡ ಗಳಿಂದ ಭಜನಾ ಕಾರ್ಯಕ್ರಮ, ಮಹಾ ಪೂಜೆ,ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ, ವಿಸರ್ಜನಾ ಪೂಜೆ,ಸಾಯಂಕಾಲ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು .
ಸ್ಥಾಪಕ ಅಧ್ಯಕ್ಷ ರು ಬೆಳ್ಳಿಪಾಡಿ ನೇಮಿರಾಜ್ ರೈ,ಹಾಗೂ ನಿಟ್ಟೆ ಶಾರದಾ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಶಾರದಾ ಪೂಜಾ ಮಹೋತ್ಸವದಲ್ಲಿ ಭಾಗವಹಿಸಿದರು.








