ಉಡುಪಿ, ಸೆ. 24: ದೊಡ್ಡಣಗುಡ್ಡೆೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ 18ನೇ ವರ್ಷದ ನವರಾತ್ರಿ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ನೇತೃತ್ವದಲ್ಲಿ ನೆರವೇರುತ್ತಿದ್ದು, ಗಾನ ನಾಟ್ಯ ಪ್ರಿಿಯೆ ದೇವಿಗೆ ಬೆಳಗ್ಗಿಿನಿಂದ ರಾತ್ರಿಯ ತನಕವೂ ನೃತ್ಯಸೇವೆ ಸಮರ್ಪಣೆಗೊಳ್ಳುತ್ತಿದೆ.
ಬುಧವಾರ ಚಾರ್ವಿ, ಕಾಯಿರಾ ಸುವರ್ಣ, ಶ್ರೀಮಾ, ಆರೋಹಿ ಅವರಿಮದ ನೃತ್ಯ ಸೇವೆ ಸಮರ್ಪಣೆಗೊಂಡಿತು. ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಹೆಜ್ಜೆೆ ಗೆಜ್ಜೆೆ ತಂಡದಿಂದ ನೃತ್ಯ ವೈವಿಧ್ಯ ಹಾಗೂ ಶ್ರೀ ಗೀತಾ ಮಹಿಳಾ ಭಜನ ಮಂಡಳಿ ಉಡುಪಿ, ಲಕ್ಷಿ ಜನಾರ್ದನ ಭಜನ ಮಂಡಳಿ ಕಾಪು, ಶ್ರೀ ಮಾತಾ ಭಜನ ಮಂಡಳಿ ಕರಂಬಳ್ಳಿಿ ಅವರಿಂದ ಭಜನೆ ಸಂಕೀರ್ತನೆ ನಡೆಯಿತು.
ಕಲಾವಿದರನ್ನು ವಿಶೇಷವಾಗಿ ಅನುಗ್ರಹಿಸುವ ಈ ಕ್ಷೇತ್ರದ ಇತಿಹಾಸ ತಿಳಿಸುವಂತೆ ತಪೋಭೂಮಿಯಾಗಿದ್ದ ಭೂಗತಗೊಂಡ ಶಕ್ತಿಿ ಕ್ಷೇತ್ರ ನಾಟ್ಯರಾಣಿ ಗಂಧರ್ವ ಕನ್ಯೆೆಯಿಂದ ಆರಾಧಿಸಲ್ಪಟ್ಟಿಿತ್ತು ಎನ್ನುವ ಪ್ರತೀತಿಯುಳ್ಳ ಹಿನ್ನೆೆಲೆಯಲ್ಲಿ ಕಲಾವಿದರು ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ತಮ್ಮ ಕಲಾಸೇವೆಯನ್ನು ಸಮರ್ಪಿಸಿ ಕೃತಾರ್ಥರಾಗಿ ಆಕೆಯ ಅನುಗ್ರಹ ಪಡೆಯುತ್ತಿದ್ದಾರೆ.
ದೇವಿಯ ಗರ್ಭಗೃಹದ ಮುಂದೆಯೇ ತಾಯಿಗೆ ನೃತ್ಯ ಸಮರ್ಪಿಸುವುದು ಇಲ್ಲಿನ ವಿಶೇಷತೆ. ಕ್ಷೇತ್ರದ ಪ್ರಧಾನ ಶಕ್ತಿಿಯ ಪ್ರಥಮ ಆರಾಧಕಿಯಾದ ನಾಟ್ಯರಾಣಿ ಗಂಧರ್ವ ಕನ್ಯೆೆಯ ಪ್ರೀತ್ಯರ್ಥವಾಗಿ ನೃತ್ಯಸೇವೆ ದುರ್ಗಾ ಆದಿಶಕ್ತಿಿ ದೇವಿಗೆ ಅಭಿಮುಖವಾಗಿ
ನೃತ್ಯ ತರಬೇತಿ ಹೊಂದಿದ, ಹೊಂದುತ್ತಿಿರುವ ಜಿಲ್ಲೆೆಯಲ್ಲದೆ ಇತರ ಜಿಲ್ಲೆೆಗಳಿಂದಲೂ ನೃತ್ಯಾಾರ್ಥಿಗಳು ನೃತ್ಯ ಸೇವೆ ನೀಡಿ ತಮ್ಮ ಕಲಾ ಬಾಳ್ವೆೆಯಲ್ಲಿ ಯಶಸ್ಸು ಕಾಣಲು ನೃತ್ಯ ಸೇವೆಯನ್ನು ನೀಡುತ್ತಾ ಬರುತ್ತಿರುವುದು ವಿಶೇಷವಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
- ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿಿ ಕ್ಷೇತ್ರ ವೈದ್ಯೆೆ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರಿಗೆ ಸಮ್ಮಾಾನ
ದೊಡ್ಡಣಗುಡ್ಡೆೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿಿ ಮಹೋತ್ಸವ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವಕ್ಕೆೆ ಚಾಲನೆ ಕಾರ್ಯಕ್ರಮದಲ್ಲಿ ಕ್ಷೇತ್ರದ ವತಿಯಿಂದ ಕ್ಷೇತ್ರದ ಆವರಣದಲ್ಲಿ ನಡೆಯುತ್ತಿರುವ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಾಭ್ಯಾಸ ಪ್ರಾಾಥಮಿಕ ಪಡೆದ ವಿದ್ಯಾರ್ಥಿನಿ, ಪ್ರಸ್ತುತ ಎಂಬಿಬಿಎಸ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ನಿಧಿಶ್ರೀ ಪ್ರಸಾದ್ ಹೆಗ್ಡೆೆ ಅವರನ್ನು ಸಮ್ಮಾಾನಿಸಲಾಯಿತು.
ಸಮ್ಮಾಾನಿಸಿದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾತನಾಡಿ, ಕ್ಷೇತ್ರ ನಿರ್ಮಾಣಕ್ಕೆೆ ಕಾರಣೀಭೂತವಾದ ಶಿಕ್ಷಣ ಸಂಸ್ಥೆೆ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾಾರ್ಥಿಗಳು ತಮ್ಮ ಬದುಕಿನಲ್ಲಿ ಶ್ರೇಯಸ್ಸನ್ನು ಕಂಡುಕೊಂಡಿರುವುದಕ್ಕೆೆ ಅತ್ಯಂತ ಹೆಮ್ಮೆಯಾಗುತ್ತಿದೆ. ನಿಧಿಶ್ರೀ ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾಾರ್ಥಿನಿ ಎಂಬುದು ನಮಗೆ ಇನ್ನಷ್ಟು ಬಿಗುಮಾನ ತಂದುಕೊಟ್ಟಿದೆ. ಮುಂದಿನ ದಿನಗಳಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಿಸುವುದರೊಂದಿಗೆ ಇನ್ನಷ್ಟು ಆಧುನಿಕ ಸೌಕರ್ಯಗಳನ್ನು ಒದಗಿಸುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ ಎಂದು ಶುಭ ಹಾರೈಸಿದರು.
ನಿಧಿಶ್ರೀಯವರ ಹೆತ್ತವರಾದ ನ್ಯಾಾಯವಾದಿ ಶಿವಪ್ರಸಾದ್ ಹೆಗ್ಡೆೆ, ಪ್ರಶಾಂತಿ ಎಸ್. ಹೆಗ್ಡೆೆ ಅವರು, ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ತಮ ಸಂಸ್ಕಾಾರ, ಸಂಸ್ಕೃತಿ, ನೈತಿಕ ಶಿಕ್ಷಣ, ಧಾರ್ಮಿಕತೆದೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ವಿದ್ಯಾಾರ್ಥಿಗಳ ಬದುಕಿಗೆ ಪೂರಕವಾದ ಶಿಕ್ಷಣ ಇಲ್ಲಿ ಸಿಗುತ್ತಿರುವುದರಿಂದ ಸುದೃಢ ಸಮಾಜ ನಿರ್ಮಾಣಕ್ಕೆೆ ಈ ಶಾಲೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಶಾಲೆಯ ಮುಖ್ಯಶಿಕ್ಷಕಿ ಉಷಾ ರಮಾನಂದ, ಶಾಲಾ ಸಂಯೋಜಕಿ ಕುಸುಮಾ ನಾಗರಾಜ್, ವಿ ವಿಖ್ಯಾಾತ್ ಭಟ್, ಕಲಾವತಿ ಉಪಸ್ಥಿತರಿದ್ದರು.

ಉಡುಪಿ: ದೊಡ್ಡಣಗುಡ್ಡೆೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ 3ನೇ ದಿನ ಮಂಗಳವಾರ ದೇವಿಯನ್ನು ಚಂದ್ರಘಂಟಾ ದೇವಿಯಾಗಿ ಅಲಂಕರಿಸಲಾಯಿತು
.








