ಕಾರ್ಕಳ:ಸೆಪ್ಟೆಂಬರ್ 24:ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು (HFA) ಯೋಜನೆಯಡಿ ಕರ್ನಾಟಕ ಸರ್ಕಾರದ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ರವರಿಂದ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ವಸತಿರಹಿತರಿಗೆ (ಅಂದರೆ ಸ್ವಂತ ಮನೆ ಇಲ್ಲದೇ ಬಾಡಿಗೆ ಆಧಾರದಲ್ಲಿ ವಾಸಿಸುವವರು) ಕಾರ್ಕಳ ಪುರಸಭಾ ವ್ಯಾಪ್ತಿಯ ಪತ್ತೊಂಜಿಕಟ್ಟೆ ಪ್ರದೇಶದಲ್ಲಿ ಗುಂಪು ಮನೆಗಳನ್ನು ನಿರ್ಮಿಸುತ್ತಿದ್ದು, ಸದ್ರಿ ಕಾಮಗಾರಿಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಯೋಗೀಶ್ ದೇವಾಡಿಗ ಇವರು ವೀಕ್ಷಿಸಿದರು,.

ಈ ಸಂದರ್ಭ ಪುರಸಭಾ ಉಪಾಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀ ಪ್ರದೀಪ್, ವಿಪಕ್ಷ ನಾಯಕರಾದ ಶ್ರೀ ಶುಭದ ರಾವ್, ಸದಸ್ಯರುಗಳಾದ ಶ್ರೀ ಹರೀಶ್ ದೇವಾಡಿಗ, ಶ್ರೀ ವಿನ್ನಿ ಬೋಲ್ಡ್ ಮೆಂಡೋನ್ಸಾ, ಶ್ರೀಮತಿ ನಳಿನಿ ವಿ ಆಚಾರ್ಯ, ಶ್ರೀಮತಿ ಪ್ರತಿಮಾ, ಶ್ರೀಮತಿ ಸುಮಾ ಕೇಶವ್, ಶ್ರೀಮತಿ ಭಾರತಿ ಅಮೀನ್, ಶ್ರೀಮತಿ ಮಮತಾ, ಶ್ರೀಮತಿ ನೀತಾ ಆಚಾರ್ಯ, ಶ್ರೀಮತಿ ಮೀನಾಕ್ಷಿ ಗಂಗಾಧರ್, ಶ್ರೀಮತಿ ರೆಹಮತ್ ಎನ್ ಶೇಖ್, ಶ್ರೀಮತಿ ಪಲ್ಲವಿ, ಶ್ರೀ ವಿವೇಕಾನಂದ ಶೆಣೈ ಹಾಗೂ ಪುರಸಭಾ ಮಖ್ಯಾಧಿಕಾರಿಗಳಾದ ಶ್ರೀಮತಿ ಲೀನಾ ಬ್ರಿಟ್ಟೋ ಹಾಗೂ ಸಹಾಯಕ ಅಭಿಯಂತರರಾದ ಶ್ರೀ ಕೃಷ್ಣ ಇವರು ಉಪಸ್ಥಿತರಿದ್ದರು. ಒಟ್ಟು 250 ಗುಂಪು ಮನೆಗಳ ಪೈಕಿ, ಈಗಾಗಲೇ 97 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಇನ್ನುಳಿದ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೂಚಿಸಿದರು.








