ಕಾಪು :ಸೆಪ್ಟೆಂಬರ್ 20:ಸ್ವಚ್ಛಮ್ ವಾಟರ್ ಆಡ್ವೆಂಚೋರ್ಸ್ ವತಿಯಿಂದ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿ ಮತ್ತು ಮಾಹೆ ಮಣಿಪಾಲ ಸಹಭಾಗಿತ್ವದಲ್ಲಿ ಇಂದು ದಿನಾಂಕ 20-09-2025 ರಂದು ಕಾಪು ಬೀಚ್‌ನಲ್ಲಿ ನಡೆದ “ವಿಶ್ವ ಕರಾವಳಿ ಶುದ್ದೀಕರಣ ದಿನ” ಕಾರ್ಯಕ್ರಮ ಆಯೋಜಿಸಲಾಗಿತ್ತು
ಕಾಪು ಕರಾವಳಿಯನ್ನು ಸ್ವಚ್ಛವಾಗಿಡುವ ಮಹತ್ವವನ್ನು ಜನರಿಗೆ ತಿಳಿಸಿ, ಸ್ವಚ್ಛ ಪರಿಸರದ ಸಂಕಲ್ಪವನ್ನು ವಿಸ್ತರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾಪು ಪುರಸಭೆಯ ಅಧ್ಯಕ್ಷರಾದ ಹರೀಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರೀತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಉಡುಪಿಯ ಅಮೃತ, ಕಾಪು ಪುರಸಭೆಯ ಸದಸ್ಯರುಗಳಾದ ನಿತಿನ್ ಕುಮಾರ್, ಶೈಲೇಶ್ ಅಮೀನ್, ಮೋಹಿನಿ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು.








