ಉಡುಪಿ : ಸೆಪ್ಟೆಂಬರ್ 09: ಉದ್ಯಮಿ, ಕ್ರಿಕೆಟ್ ಆಟಗಾರ ಅಂಬಲಪಾಡಿ ಕಿದಿಯೂರಿನ ಪ್ರದೀಪ್(52) ಸೋಮವಾರ ರಾತ್ರಿ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮಾಣಿ’ ಎಂದೇ ಪ್ರಸಿದ್ಧರಾಗಿದ್ದ ಇವರು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಒಡೆತನದ ಮಲ್ಪೆಯ ಪೆಟ್ರೋಲ್ ಪಂಪ್ ನಲ್ಲಿ ವ್ಯವಸ್ಥಾಪಕರಾಗಿದ್ದರು.
ಉಡುಪಿಯ ಕ್ರಿಕೆಟ್ ಪ್ಯಾರಡೈಸ್ ಕ್ರಿಕೆಟ್ ತಂಡದಲ್ಲಿ ಆರಂಭಿಕ ಆಟಗಾರರಾಗಿದ್ದು, ಉತ್ತಮ ಕ್ರಿಕೆಟರ್ ಆಗಿದ್ದರು. ಇದೀಗ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಅವರು, ಉತ್ತಮ ಜಿಮ್ ಪಟು ಆಗಿದ್ದರು.








