Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಇಂದು ದೇಶಾದ್ಯಂತ ‘ಖಗ್ರಾಸ ಚಂದ್ರ ಗ್ರಹಣ’..!!

Dhrishya News by Dhrishya News
07/09/2025
in ಮುಖಪುಟ
0
0
SHARES
80
VIEWS
Share on FacebookShare on Twitter

ಬೆಂಗಳೂರು:ಸೆಪ್ಟೆಂಬರ್ 07 : ಖಗೋಳದ ಅಪರೂಪದ ಮತ್ತು ಅಪೂರ್ವವಾದ ವಿದ್ಯಮಾನ ಖಗ್ರಾಸ ಚಂದ್ರ ಗ್ರಹಣ ಸೆ.7ರ ರಾತ್ರಿ ಜರುಗಲಿದ್ದು, ಚಂದಿರನು ರಕ್ತ ವರ್ಣ/ತಾಮ್ರ ವರ್ಣದಲ್ಲಿ ಕಾಣಿಸಲಿದ್ದಾನೆ.

ಈ ಅಪರೂಪದ ಖಗೋಳ ವಿಸ್ಮಯ ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ.

ಸೆ.7ರಂದು ರಾತ್ರಿ 8.58ಕ್ಕೆ ಚಂದ್ರ ಗ್ರಹಣ ಆರಂಭವಾಗಿ, 9.57ರಿಂದ ಭಾಗಶಃ ಚಂದ್ರಗ್ರಹಣ ಶುರುವಾಗು ತ್ತದೆ. ಆದರೆ, ರಾತ್ರಿ 11ರಿಂದ ಸಂಪೂರ್ಣ ಗ್ರಹಣ ಆರಂಭವಾಗುತ್ತದೆ. ಈ ಅವಧಿಯಲ್ಲೇ ಕೆಂಪು ಚಂದಿರನನ್ನು ಕಾಣಬಹುದಾಗಿದೆ. ಗ್ರಹಣ ತಡರಾತ್ರಿ 1.26 ಮುಕ್ತಾಯಗೊಳ್ಳಲಿದೆ. ಭಾರತದ ಎಲ್ಲೆಡೆ ಈ ಗ್ರಹಣ ಕಾಣಿಸುತ್ತದೆ. 

ಸೂರ್ಯ, ಭೂಮಿ ಮತ್ತು ಚಂದ್ರ ಸರಳ ರೇಖೆಯಲ್ಲಿ ಬಂದಾಗ, ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಭೂಮಿ ತಡೆಯುತ್ತದೆ. ಆಗ ಚಂದ್ರ ಆಕಾಶಕಾಯವಾಗಿ ರಕ್ತವರ್ಣದ ಗೋಚರಿಸುತ್ತದೆ. ಈಗ ಮಳೆಗಾಲ ವಿದ್ದು, ಮೋಡ ಬಂದರೆ ಗ್ರಹಣ ವೀಕ್ಷಣೆ ಕಷ್ಟವಾಗುತ್ತದೆ. ಟೆಲಿಸ್ಕೋಪ್ ಬಳಸಿದರೆ ಚಂದಿರನ ಮೇಲ್ಮಯನ್ನು ವಿವರವಾಗಿ ನೋಡಬಹುದುಎಂದುಗುರುಪ್ರಸಾದ್ ಹೇಳಿದರು.

ಈ ಅಪರೂಪದ ಖಗೋಳ ವಿಸ್ಮಯ ಭಾರತದಲ್ಲಿ 5 ತಾಸು 27 ನಿಮಿಷಗಳ ಕಾಲ ಇರಲಿದೆ. ಅದರಲ್ಲಿ 1 ತಾಸು 22 ನಿಮಿಷಗಳ ಕಾಲ ಸಂಪೂರ್ಣ ಗ್ರಹಣ ಇರಲಿದೆ. ನಾಗರಿಕರು ತಮ್ಮ ಮನೆಗಳ ಮೇಲೆ ನಿಂತು ಬರಿಗಣ್ಣಿನಲ್ಲೇ ಕೆಂಪು ಶಶಿಯನ್ನು ವೀಕ್ಷಿಸಬಹುದಾಗಿದೆ ಎಂದು ಜವಾಹರ ಲಾಲ್ ನೆಹರು ತಾರಾಲಯದ ನಿರ್ದೇಶಕ, ವಿಜ್ಞಾನಿ ಡಾ.ಬಿ.ಆರ್. ಗುರುಪ್ರಸಾದ್ ತಿಳಿಸಿದರು.

ಚಂದ್ರಗ್ರಹಣ ಹಿನ್ನೆಲೆ ರಾಜ್ಯದ ಹಲವು ದೇವಸ್ಥಾನಗಳನ್ನು ಸಂಜೆಯೇ ಬಂದ್ ಮಾಡಲಾಗುತ್ತದೆ. ಚಿಕ್ಕಬಳ್ಳಾಪುರದ ಭೋಗನಂದೀಶ್ವರ ದೇವಾಲಯವನ್ನು ಸಂಜೆ 4.30ಕ್ಕೆ ಬಂದ್ ಮಾಡಲಾಗುತ್ತದೆ. ಶೃಂಗೇರಿ ಶಾರದಾಂಬೆ, ಹೊರನಾಡು ಅನ್ನಪೂರ್ಣೇ ಶ್ವರಿ ದೇಗುಲಗಳಲ್ಲಿ ರಾತ್ರಿ ಪ್ರಸಾದ ವಿತರಣೆ ಇರುವುದಿಲ್ಲ.

ಇಡಗುಂಜಿ, ಗೋಕರ್ಣ, ಮುರ್ಡೇಶ್ವರ ದೇವಾಲಯಗಳಲ್ಲಿ ಅಭಿಷೇಕ ನಡೆಸಿದ ಬಳಿಕ ಬಾಗಿಲು ಹಾಕಲಾಗುವುದು. ಕೊಪ್ಪಳದ ಅಂಜನಾದ್ರಿ ಹಾಗೂ ಹುಲಿಗೆಮ್ಮ ದೇವಿಯ ದರ್ಶನವನ್ನು ಸಂಜೆ 5ರಿಂದ ರದ್ದುಪಡಿಸಲಾಗಿದೆ. ಕಿಗ್ಗಾ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗ್ರಹಣದ ಆರಂಭದಿಂದ ಅಂತ್ಯದವರೆಗೆ ಜಲಾಭಿಷೇಕ ನಡೆಯಲಿದೆ.

Previous Post

ಮೈಸೂರು ದಸರಾ ವೀಕ್ಷಣೆಗೆ ಗೋಲ್ಡ್ ಕಾರ್ಡ್‌ ಬಿಡುಗಡೆ -ಟಿಕೆಟ್​ ಖರೀದಿ ಹೇಗೆ? ದರ ಎಷ್ಟು ಇಲ್ಲಿದೆ ಮಾಹಿತಿ..!!

Next Post

ಶ್ರೀಕೃಷ್ಣ ಮಠಕ್ಕೆ ಅಂತರರಾಷ್ಟ್ರೀಯ ಕಲಾವಿದ ದಂಪತಿಗಳಾದ ಕುಮರೇಶ್, ಜಯಂತಿ ಕುಮರೇಶ್ ದಂಪತಿಗಳು ಭೇಟಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಶ್ರೀಕೃಷ್ಣ ಮಠಕ್ಕೆ ಅಂತರರಾಷ್ಟ್ರೀಯ ಕಲಾವಿದ ದಂಪತಿಗಳಾದ ಕುಮರೇಶ್, ಜಯಂತಿ ಕುಮರೇಶ್ ದಂಪತಿಗಳು ಭೇಟಿ..!!

ಶ್ರೀಕೃಷ್ಣ ಮಠಕ್ಕೆ ಅಂತರರಾಷ್ಟ್ರೀಯ ಕಲಾವಿದ ದಂಪತಿಗಳಾದ ಕುಮರೇಶ್, ಜಯಂತಿ ಕುಮರೇಶ್ ದಂಪತಿಗಳು ಭೇಟಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿಯಲ್ಲಿ ಮೇ ದಿನಾಚರಣೆ: ಕಾರ್ಮಿಕರ ಹಕ್ಕುಗಳ ಕುರಿತ ವಿಚಾರಸಂಕಿರಣ

ಉಡುಪಿಯಲ್ಲಿ ಮೇ ದಿನಾಚರಣೆ: ಕಾರ್ಮಿಕರ ಹಕ್ಕುಗಳ ಕುರಿತ ವಿಚಾರಸಂಕಿರಣ

01/05/2026
ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

01/05/2026
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!

01/05/2026
ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವದ ಸಂಭ್ರಮ

ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವದ ಸಂಭ್ರಮ

01/05/2026

Recent News

ಉಡುಪಿಯಲ್ಲಿ ಮೇ ದಿನಾಚರಣೆ: ಕಾರ್ಮಿಕರ ಹಕ್ಕುಗಳ ಕುರಿತ ವಿಚಾರಸಂಕಿರಣ

ಉಡುಪಿಯಲ್ಲಿ ಮೇ ದಿನಾಚರಣೆ: ಕಾರ್ಮಿಕರ ಹಕ್ಕುಗಳ ಕುರಿತ ವಿಚಾರಸಂಕಿರಣ

01/05/2026
ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

ಮಾಹೆಯ 8ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ಶರತ್ ಕೆ. ರಾವ್  

01/05/2026
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ನಲ್ಲಿ ವಿದ್ಯಾರ್ಥಿನಿಯರಿಗೆ 500 ಹೊಸ ಶಿಷ್ಯವೇತನಗಳಿಂದ 2,200ಕ್ಕೆ ವಿಸ್ತರಣೆ..!!

01/05/2026
ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವದ ಸಂಭ್ರಮ

ಮಣಿಪಾಲವನ್ನು ಶಿಕ್ಷಣಕಾಶಿಯನ್ನಾಗಿಸಿದ ಡಾ. ಟಿ.ಎಂ.ಎ. ಪೈ 128ನೇ ಜನ್ಮದಿನೋತ್ಸವದ ಸಂಭ್ರಮ

01/05/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved